ಜಿಲ್ಲೆ

ಬಸು ಬೇವಿನಗಿಡದಗೆ ಅನುವಾದ ಪುರಸ್ಕಾರ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಹಿರಿಯ ಕತೆಗಾರ ಹಾಗೂ ಅನುವಾದಕ ಡಾ. ಬಸು ಬೇವಿನಗಿಡದ ಅವರು 2024ನೇ ಸಾಲಿನ ಕುವೆಂಪು ಭಾಷಾ ಭಾರತೀಯ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇಂಗ್ಲಿಷ್​ ಲೇಖಕ ಸಾಮರಸೆಟ್​ ಮಾಮ್​ನ ಆಯ್ದ ಕತೆಗಳ ಅನುವಾದ "ಅಪರಾಜಿತೆ', ಶಾಂತಿನಾಥ ದೇಸಾಯಿ ಸಂಪಾದಿಸಿರುವ "ಸಮಕಾಲೀನ ಭಾರತೀಯ ಸಣ್ಣಕತೆಗಳು', ಜಸಲೀನ್​ ಧಮೀಜ್​ ಅವರ "ಕಮಲಾದೇವಿ ಚಟ್ಟೋಪಾಧ್ಯಾಯ ಜೀವನ ಚರಿತ್ರೆ' ಸೇರಿ 11 ಅನುವಾದ ಕೃತಿಗಳನ್ನು ಬಸು ಬೇವಿನಗಿಡದ ಪ್ರಕಟಿಸಿದ್ದಾರೆ.