ರಾಯಚೂರಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಜರುಗಿದ ಟಿಯುಸಿಐ ರಾಜ್ಯ ಸಮ್ಮೇಳನದಲ್ಲಿ ಸಿಪಿಐಎಂಎಲ್ ರೆಡ್‌ಸ್ಟಾರ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿದರು. ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಜಿಲ್ಲಾಧ್ಯಕ್ಷ ಜಿ.ಅಮರೇಶ, ಪದಾಕಾರಿಗಳಾದ ಎಂ.ಡಿ.ಅಮೀರ್ ಅಲಿ, ಶ್ರೀನಿವಾಸ ಕಂದೇಗಾಲ, ರುಕ್ಮಣಿ, ಬಿ.ಆರ್.ಸಂದೀಪ್, ಚಿನ್ನಪ್ಪ ಕೊಟ್ರಕಿ ಇದ್ದರು. 
ಜಿಲ್ಲೆ

ಆಳುವ ವರ್ಗ ಸರ್ವಾಧಿಕಾರಿಯಾಗಿ ರೂಪಾಂತರ

ರಾಚಯ್ಯ ಸ್ವಾಮಿ

ರಾಯಚೂರು: ದೇಶದಲ್ಲಿ ಆಳುವ ವರ್ಗ ಸರ್ವಾಧಿಕಾರಿಯಾಗಿ ರೂಪಾಂತರಗೊಂಡು ಜನರ ಹಕ್ಕುಗಳನ್ನು ದಮನಗೊಳಿಸುತ್ತಿದೆ. ಇದರ ವಿರುದ್ಧ ದುಡಿಯುವ ವರ್ಗ ಕ್ರಾಂತಿಕಾರಿ ಸಂಘರ್ಷ ತೀವ್ರಗೊಳಿಸದಿದ್ದಲ್ಲಿ ದೇಶದ ಭವಿಷ್ಯಕ್ಕೆ ಉಳಿಗಾಲವಿಲ್ಲ ಎಂದು ಸಿಪಿಐಎಂಎಲ್ ರೆಡ್‌ಸ್ಟಾರ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಹೇಳಿದರು.
ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಜರುಗಿದ ಟಿಯುಸಿಐನ 9ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡು ಕಾರ್ಪೋರೇಟ್‌ಬಂಡವಾಳಶಾಹಿಗಳ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ದೂರಿದರು.
ಹಿರಿಯ ನ್ಯಾಯವಾದಿ ಎಸ್.ಬಾಲನ್ ಮಾತನಾಡಿ, ಪ್ರಧಾನಿ ಮೋದಿ ಮಾತಿನಲ್ಲಿಯೇ ಮನೆ ಕಟ್ಟುತ್ತಿದ್ದಾರೆ. ಸುಳ್ಳುಗಳ ಸರಮಾಲೆ ಪೋಣಿಸುತ್ತಾ, ಕಾರ್ಪೋರೇಟ್ ಬಂಡವಾಳಶಾಹಿಗಳ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ದೇಶದ ಸಂಪನ್ಮೂಲಗಳನ್ನು ಉದ್ಯಮಿಗಳ ಪಾದದ ಅಡಿಯಲ್ಲಿಟ್ಟಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿರುವ ಹಿಂದುತ್ವ ್ಯಾಸಿಸಂ ವಿರುದ್ಧ ಸಿಡಿದೇಳುವ ಪ್ರಕ್ರಿಯೆಯಲ್ಲಿ ಕಾರ್ಮಿಕ ವರ್ಗ ನಿರತಗೊಂಡು ಹೋರಾಟಕ್ಕೆ ಸಿದ್ಧವಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಶ್ರಮಿಕ ಶಕ್ತಿಯ ಪ್ರಮುಖ ವರದರಾಜೇಂದ್ರ, ಸಂಘಟನೆ ಜಿಲ್ಲಾಧ್ಯಕ್ಷ ಜಿ.ಅಮರೇಶ, ಪದಾಕಾರಿಗಳಾದ ಎಂ.ಡಿ.ಅಮೀರ್ ಅಲಿ, ಶ್ರೀನಿವಾಸ ಕಂದೇಗಾಲ, ರುಕ್ಮಣಿ, ಬಿ.ಆರ್.ಸಂದೀಪ್, ಚಿನ್ನಪ್ಪ ಕೊಟ್ರಕಿ, ಆರ್.ಹುಚ್ಚರೆಡ್ಡಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿನಿಗಳು ಉಪಸ್ಥಿತರಿದ್ದರು.