ಜಿಲ್ಲೆ

ಅಧ್ಯಾತ್ಮ ಶಕ್ತಿಯಿಂದ ಮನಸು ಪರಿವರ್ತನೆ

ಶಿರೋಳ: ತಂತ್ರಜ್ಞಾನ ಯುಗದಲ್ಲಿ ಮನುಷ್ಯನಲ್ಲಿ ಆತ್ಮದ ಅರಿವಿನಿ ಕೊರತೆ ಇದೆ. ಮಾನವನ ಮನಸು ಪರಿವರ್ತನೆಯಾಗಬೇಕಾದರೆ ಅದು ಆಧ್ಯಾತ್ಮಿಕ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ತೋಂಟದಾರ್ಯ ಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಗ್ರಾಮದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ನಿಮಿತ್ತ 20 ದಿನಗಳ ಕಾಲ ನಡೆಯುವ ಶ್ರೀ ಮದಥಣಿ ಮಹಾತಪಸ್ವಿ ಮುರುಘೕಂದ್ರ ಶಿವಯೋಗಿಗಳ ಚರಿತಾಮೃತ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರವಚನಕಾರ ಪ್ರಭಾಕರ ಉಳ್ಳಾಗಡ್ಡಿ ಮಾತನಾಡಿ, ಮನುಷ್ಯನ ಬದುಕು ಅಸಮಾನವಾಗಿದೆ. ನಾನು, ನನ್ನದು, ನನ್ನಿಂದಲೇ ಎಂಬ ಅಹಂಭಾವ ತೊರೆದು ಬಸವಣ್ಣ ನವರು ಹೇಳಿದಂತೆ ನಿತ್ಯ ಜೀವನದಲ್ಲಿ ಸತ್ಯ ಶುದ್ಧ ಕಾಯಕದಲ್ಲಿ ತೊಡಗಿಕೊಳ್ಳಬೇಕು ಎಂದರು.

ಜಾತ್ರಾ ಸಮಿತಿ ಅಧ್ಯಕ್ಷ ಶಿವಾನಂದ ಯಲಬಳ್ಳಿ, ಶ್ರೀಧರ ಶೀಪ್ರಿ, ಬಸಪ್ಪ ಕುರಿಯವರ, ಪರಶುರಾಮ ಮಡಿವಾಳರ, ಗೂಡುಸಾಬ್ ಯಲಿಗಾರ, ಕುಮಾರ ಮರಿಗುದ್ದಿ , ಶರಣಯ್ಯ ಹಿರೇಮಠ, ಗಂಗಯ್ಯ ವಸ್ತ್ರದ, ವೆಂಕಪ್ಪ ಶಾಂತಗೇರಿ, ಶಿದ್ದಪ್ಪ ಸುರೇಬಾನ, ಸಂಗಣ್ಣ ಕಿತ್ತಲಿ, ಹನಮಂತ ಕಾಡಪ್ಪನವರ, ಮಂಜು ಕವಡಿಮಟ್ಟಿ, ದ್ಯಾಮಣ್ಣ ಶಾಂತಗೇರಿ, ವೀರಯ್ಯ ದೊಡಮನಿ, ಬಸಯ್ಯ ಮಠದ, ಶಿವಲಿಂಗಪ್ಪ ಯಲಬಳ್ಳಿ, ಶರಣಪ್ಪ ಚಿಕ್ಕನರಗುಂದ, ಶ್ರೀಶೈಲಪ್ಪ ಗಟ್ಟಿ, ಶರಣಪ್ಪ ಮಡಿವಾಳರ ಇತರರಿದ್ದರು. ಬಸವರಾಜ ಗಡ್ಡಿ ಪ್ರಸಾದ ಸೇವೆ ಮಾಡಿದರು. ಬಾಪುಗೌಡ್ರ ತಿಮ್ಮನಗೌಡ್ರ ಕಾರ್ಯಕ್ರಮ ನಿರ್ವಹಿಸಿದರು. ಈರಣ್ಣ ಹೂಲಿ, ಗುರುಪಾದಪ್ಪ ಭಜಂತ್ರಿ,ಮಲ್ಲನ್ನ ಚಿಕ್ಕನರಗುಂದ, ಬಸವರಾಜ ಕುಪ್ಪಸ ಸಂಗೀತ ಸೇವೆ ಸಲ್ಲಿಸಿದರು.