ಜಿಲ್ಲೆ

ಮೊಬೈಲ್ ಕಳ್ಳತನ ಮಾಡಿ ಯುಪಿಐನಿಂದ ಹಣ ವರ್ಗಾವಣೆ, ಬಾಲಕ ಸೇರಿ ಮೂವರು ಅಂತರ ರಾಜ್ಯ ಕಳ್ಳರ ಬಂಧನ

ಗುತ್ತಲ: ಮೊಬೈಲ್ ಕಳ್ಳತನ ಮಾಡಿ ಅದರಲ್ಲಿನ ಪೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂನ ಯುಪಿಐ ನಂಬರ್ ಅನ್ನು ಪ್ಯಾಟರ್ನ್ ಅಥವಾ ಪಾಸ್​ವರ್ಡ್ ಅನ್ನು ಅನ್ ಲಾಕ್ ಮಾಡಿ ಹಣ ಲಪಟಾಯಿಸುತ್ತಿದ್ದ ಅಂತರ ರಾಜ್ಯದ ಒಬ್ಬ ಬಾಲಕ ಸೇರಿ ಮೂವರು ಕಳ್ಳರನ್ನು ಗುತ್ತಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಗುಂಜರಿಯಾ ಸಾಯಿಕುಮಾರ, ತೆಲಂಗಾಣದ ಅಕುಲ ವಡಿವೇಲು ಹಾಗೂ ಒಬ್ಬ ಬಾಲಕ ಬಂಧಿತರು.

ಮೊಬೈಲ್ ಕಳ್ಳತನ ಮಾಡಿದ ನಂತರ ಆನ್​ಲೈನ್ ಸೆಂಟರ್​ಗೆ ತೆರಳುತ್ತಿದ್ದ ಇವರು, ನಮ್ಮ ವಾಹನ ಕೆಟ್ಟಿದಿ. ನಮ್ಮ ಮಾಲೀಕರು ನಿಮ್ಮ ನಂಬರ್​ಗೆ ಹಣ ವರ್ಗಾವಣೆ ಮಾಡುತ್ತಾರೆ. ನೀವು ನಮಗೆ ಹಣ ನೀಡಿದರೆ, ಕಮಿಷನ್ ನೀಡುತ್ತೇವೆಂದು ಅವರ ಬಳಿ ಹಣ ಪಡೆದು ಕದ್ದ ಮೊಬೈಲ್ ನಂಬರ್​ನಿಂದ ಹಣ ವರ್ಗಾವಣೆ ಮಾಡುತ್ತಿದ್ದರು.

ಎಸ್​ಪಿ, ಎಎಸ್​ಪಿ, ಡಿವೈಎಸ್​ಪಿ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಪವಾರ್, ಪಿಎಸ್​ಐ ಶಂಕರಗೌಡ ಪಾಟೀಲ, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಎಪಿಸಿಗಳಾದ ಮಾರುತಿ ಹಾಲಬಾವಿ, ಸತೀಶ ಮಾರನಕಟ್ಟಿ, ಹಾಗೂ ಗುತ್ತಲ ಠಾಣೆಯ ಮುಖ್ಯ ಪೇದೆ ಕೆ.ಎಚ್. ಚನ್ನಕೇರಿ ಮತ್ತು ತಂಡ ಕಾರ್ಯಾಚರಣೆ ಕೈಗೊಂಡು, 2 ಲಕ್ಷ ರೂ. ಬೆಲೆಯ ವಿವಿಧ ಕಂಪನಿಯ ಸುಮಾರು 27 ಮೊಬೈಲ್ ಫೋನ್​ಗಳು, 1.36 ಲಕ್ಷ ರೂ. ನಗದು ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.