ಬೆಟ್ಟದಪುರ: ಬೆಟ್ಟದಪುರದ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ಊಟ ಬಡಿಸುವ ಟ್ರ್ಯಾಲಿಯನ್ನು ಇತ್ತೀಚೆಗೆ ವಿತರಣೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಪಿಡಿಒ ಮಂಜುನಾಥ್, ಮಕ್ಕಳು ಕುಳಿತಲ್ಲೇ
ಊಟ ಬಡಿಸುವ ಉದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಟ್ರ್ಯಾಲಿಯನ್ನು ನೀಡಲಾಗುತ್ತಿದೆ. ಇದರಿಂದ ಮಕ್ಕಳು ಅನಗತ್ಯ ಓಡಾಡುವುದು ತಪ್ಪುತ್ತದೆ. ಒಂದೆಡೆ ಕುಳಿತು ಸೂಕ್ತವಾಗಿ ಊಟ ಮಾಡಲು ಅನುಕೂಲವಾಗುತ್ತದೆ. ಶುಚಿತ್ವ ಪಾಲನೆಗೂ ಸಹಕಾರಿಯಾಗುತ್ತದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ವೀಣಾ, ಶಿಲ್ಪಾ, ರೇಖಾ, ಗಿರಿಗೌಡ, ಶಿಕ್ಷಕರಾದ ಗೊರಳ್ಳಿ ಜಗದೀಶ್, ಸೋಮಯ್ಯನಾಯಕ್, ಕಾರ್ಯದರ್ಶಿ ಪಾಂಡು, ಸಿಬ್ಬಂದಿ ಶ್ರೀನಿಧಿ, ದೀಪು, ಅಣ್ಣಯ್ಯ, ಮುರುಗೇಶ್, ಸುಬ್ರಹ್ಮಣ್ಯ, ಮೋಹನ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.