ಬೈಂದೂರು ತಾಲೂಕು ಪಶು ಅಸ್ಪತ್ರೆ ಆವರಣದಲ್ಲಿ ಗುರುವಾರ 21ನೇ ರಾಷ್ಟ್ರೀಯ ಜಾನುವಾರು ಗಣತಿಯ ಗಣತಿದಾರರ ತರಬೇತಿ ಕಾರ್ಯಗಾರಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಚಾಲನೆ ನೀಡಿದರು 
ಜಿಲ್ಲೆ

ಜಾನುವಾರು ಗಣತಿಗೆ ಸಹಕಾರ

ಇಂದಿರಾ ಎನ್ ಕೆ

ಬೈಂದೂರು: ಗಣತಿ ಕಾರ್ಯಕ್ರಮ ಕ್ಷೇತ್ರದ ಹಾಗೂ ದೇಶದ ಆರ್ಥಿಕ ಕಾರ್ಯಕ್ರಮ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ. ಇದಕ್ಕೆ ಕ್ಷೇತ್ರದ ಮತದಾರರು ಎಲ್ಲರೂ ಕೈಜೋಡಿಸಬೇಕು ಎಂದು ತಹಸೀಲ್ದಾರರು ಪ್ರದೀಪ್ ಆರ್. ಹೇಳಿದರು.

ತಾಲೂಕು ಪಶು ಆಸ್ಪತ್ರೆ ಆವರಣದಲ್ಲಿ ಗುರುವಾರ 21ನೇ ರಾಷ್ಟ್ರೀಯ ಜಾನುವಾರು ಗಣತಿಯ ಗಣತಿದಾರರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶಾಸಕ ಗುರುರಾಜ್ ಗಂಟಿಹೊಳೆ ಗಣತಿದಾರರ ಕೈಪಿಡಿ ಬಿಡುಗಡೆ ಮಾಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್. ಗ್ರಾಮೀಣ ಭಾಗದ ಗಣತಿ ಅಂಕಿ ಅಂಶಗಳು ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಮಹತ್ವ ಸಿಗಲಿದ್ದು, ಕಾರ್ಯಕ್ರಮಕ್ಕೆ ಎಲ್ಲ ಗ್ರಾಪಂಗಳ ಮೂಲಕ ಸಹಕಾರ ನೀಡುವುದಾಗಿ ತಿಳಿಸಿದರು. ಜಿಲ್ಲಾ ತರಬೇತುದಾರ ಡಾ.ಅನಿಲ್ ತರಬೇತಿ ನೀಡಿದರು. ಬೈಂದೂರು ಪಶು ಸಂಜೀವಿನಿ ಘಟಕದ ಪಶು ವೈದ್ಯ ಡಾ.ಶಂಕರ್ ಶೆಟ್ಟಿ ಮೊದಲಾದವರಿದ್ದರು. ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ.ನಾಗರಾಜ್ ಪ್ರಸ್ತಾವಿಸಿದರು. ಡಾ.ಅರುಣ್ ವೈ.ಕೆ. ಸ್ವಾಗತಿಸಿದರು. ಡಾ.ಹರೀಶ್ ಕೆ.ಪಿ. ವಂದಿಸಿದರು. ಪಶುಸಕಿ ಶಿಲ್ಪಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.