ಮಳವಳ್ಳಿ ತಾಲೂಕಿನ ಬಿ.ಜಿ.ಪುರ ಸಮೀಪದ ಸರಗೂರು ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ತರಬೇತಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಧುಗಂಗಾಧರ್, ಬಸವರಾಜು, ಹಳದಾಸನಹಳ್ಳಿ ಎಚ್.ಎಂ.ಶಿವಣ್ಣ, ಶಿವಲಿಂಗಸ್ವಾಮಿ, ರಾಮಣ್ಣ, ಅಶೋಕ್, ಕುಮಾರ, ಪ್ರಸಾದ್, ನಂಜುಂಡ ಇದ್ದರು. 
ಜಿಲ್ಲೆ

ನಿರುದ್ಯೋಗ ನಿವಾರಣೆಗೆ ತರಬೇತಿ

ಅವರವರ ಕುಲಕಸುಬುಗಳು ಮತ್ತು ಪ್ರತಿಭೆಗೆ ಅನುಗುಣವಾಗಿ ಕೌಶಲ ತರಬೇತಿಗಳನ್ನು ನೀಡುವುದರ ಜತೆಗೆ ಕಸುಬಿಗೆ ಅನುಗುಣವಾಗಿ ತರಬೇತಿ ಪಡೆದವರಿಗೆ ಸಲಕರಣೆಗಳ ಕಿಟ್ಟ್‌ಗಳನ್ನು ನೀಡಲಾಗುತ್ತದೆ. ಇವುಗಳ ಬಳಕೆ ಮಾಡಿಕೊಂಡು ಸ್ವ ಉದ್ಯೋಗದ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.

ತಾಲೂಕಿನ ಬಿ.ಜಿ.ಪುರ ಸಮೀಪದ ಸರಗೂರು ಬಳಿ ಇರುವ ಮಠದ ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿ.ಬಸವಯ್ಯ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗ್ರಾಮೋದ್ಯೋಗ ಆಯೋಗ ಮತ್ತು ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ ವಿವಿಧ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಹೆಚ್ಚು ಸಿಗುವಂತಾಗಲು ಗುಡಿ ಕೈಗಾರಿಕೆಗಳಿಗೆ ಹೆಚ್ಚು ಹೊತ್ತು ನೀಡಲಾಗುತ್ತಿದೆ. ಹಾಗಾಗಿ ಯುವಕ, ಯುವತಿಯರಿಗೆ ಕೌಶಲ ತರಬೇತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲು ಎನ್‌ಜಿಒ ಮತ್ತು ಸೇವಾ ಟ್ರಸ್ಟ್‌ಗಳ ಸಹಯೋಗದೊಡನೆ ಕೇಂದ್ರ ಸರ್ಕಾರ ನೀಡುತ್ತಿದೆ. ಈ ಮೂಲಕ

ಮಳವಳ್ಳಿ: ಗ್ರಾಮೀಣ ಪ್ರದೇಶದ ಯುವಕರ ನಿರುದ್ಯೋಗ ನಿವಾರಣೆ ಹಾಗೂ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ ಹಲವು ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಬಿ. ಬಸವಯ್ಯ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ಮಧುಗಂಗಾಧರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಠದ ಪೀಠಾಧ್ಯಕ್ಷ ಬಸವರಾಜೇಂದ್ರ ಸ್ವಾಮೀಜಿ, ಖಾದಿ ಗ್ರಾಮೋದ್ಯೋಗ ಇಲಾಖೆಯ ವಿ.ಆರ್.ಮರಾಠ, ಮಹಾಶಕ್ತಿ ಕೇಂದ್ರದ ಪ್ರಧಾನಕಾರ್ಯದರ್ಶಿ ಬಸವರಾಜು, ಬಿಜೆಪಿ ಮುಖಂಡರಾದ ಹಳದಾಸನಹಳ್ಳಿ ಎಚ್.ಎಂ.ಶಿವಣ್ಣ, ಶಿವಲಿಂಗಸ್ವಾಮಿ, ರಾಮಣ್ಣ, ಅಶೋಕ್, ಕುಮಾರ, ಪ್ರಸಾದ್, ನಂಜುಂಡ ಇತರರು ಇದ್ದರು.