ಬೆಂಗಳೂರು: ನಗರ ಪ್ರದೇಶಗಳಲ್ಲಿ ಹಸಿರು ಸಾರಿಗೆ ವಿದ್ಯುತ್ ವಾಹನಗಳ ಯೋಜನೆ ಮತ್ತು ಅನುಷ್ಠಾನ ಕುರಿತು ತರಬೇತಿ ಕಾರ್ಯಕ್ರಮ ಇತ್ತೀಚೆಗೆ ನಗರದಲ್ಲಿ ನಡೆಯಿತು. ಕೇಂದ್ರ ಸಾರಿಗೆ ಸಚಿವಾಲಯ ಹಾಗೂ ನಗರ ಮತ್ತು ವಸತಿ ದೋಷ ನಿರ್ದೇಶನ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ
ನಗರ ಪ್ರದೇಶಗಳಲ್ಲಿ ಹಸಿರು ಸಾರಿಗೆಯಿಂದ ಉಂಟಾಗಿರುವ ನವೀನತೆ ಮತ್ತು ಅಭಿವೃದ್ದಿ ಕ್ರಮಗಳ ಮಹತ್ವಪೂರ್ಣ ಅವಕಾಶಗಳ ಕುರಿತು ಭಾಗವಹಿಸಿದ್ದವರಿಗೆ ಮಾಹಿತಿ ಒದಗಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿಎಂಟಿಸಿ ಎಂಡಿ ರಾಮಚಂದ್ರನ್, ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ವಿದ್ಯುತ್ ಬಸ್ಸುಗಳ ಸೇವೆ ಆರಂಭವಾದ ನಂತರ ಉಂಟಾಗಿರುವ ಸವಾಲುಗಳು ಮತ್ತು ಅವುಗಳನ್ನು ಎದುರಿಸಿ ಯಶಸ್ವಿಯಾಗಿ ಬಳಕೆ ಮಾಡುತ್ತಿರುವುದರ ಕುರಿತು ವಿವರಿಸಿದರು. ನಗರದ ವಾಯು ಮಾಲಿನ್ಯ ತಗ್ಗಿಸುವುದು, ಇಂಧನ ಬಳಕೆ ಕಡಿಮೆ ಮಾಡುವುದು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಶಾಶ್ವತವಾಗಿ ಸುಧಾರಿಸಲು ಬಿಎಂಟಿಸಿ ಕೈಗೊಂಡ ವಿವಿಧ ಚಟುವಟಿಕೆಗಳು, ವಿದ್ಯುತ್ ಬಸ್ಸುಗಳಿಗೆ ಅಗತ್ಯವಿರುವ ಚಾರ್ಜಿಂಗ್ ವಲಯಗಳ ಸ್ಥಾಪನೆ, ತಂತ್ರಜ್ಞಾನದ ಸಮರ್ಪಕ ಬಳಕೆ ಹಾಗೂ ಮುಂದಿನ ದಿನಗಳಲ್ಲಿ ಇ-ವಾಹನಗಳ ಸಂಖ್ಯೆ ಹೆಚ್ಚಿಸುವ ಮೂಲಕ ನಗರದಲ್ಲಿ ಹಸಿರು ಸಾರಿಗೆಯನ್ನು ಪ್ರೋತ್ಸಾಹಿಸುವ ಕುರಿತು ವಿವರಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಹಲವು ಅಧಿಕಾರಿಗಳು ಭಾಗವಹಿಸಿದ್ದರು.