ಜಿಲ್ಲೆ

ತರಬೇತಿ ಕಾರ್ಯಕ್ರಮ ಇಂದಿನಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆ, ಮೈಸೂರು ಅಬ್ದುಲ್​ ನಜೀರ್​ಸಾಬ್​ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ತರಬೇತಿ ಸಂಸ್ಥೆ, ಧಾರವಾಡ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತ ಗ್ರಾಮ ಸ್ವರಾಜ್​ ಅಭಿಯಾನ ಕರ್ನಾಟಕ ಹಾಗೂ ನಾಗರಿಕ ಸಮಾಜ ಸೇವಾ ಸಂಸ್ಥೆಗಳ ಒಕ್ಕೂಟ ಆಶ್ರಯದಲ್ಲಿ ವಿಭಾಗ ಮಟ್ಟದ ಕಾಯಕ ಬಂಧುಗಳ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಡಿ. 7ರಿಂದ 16ರವರೆಗೆ ವಾಲ್ಮಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಜಿಪಂ ಸಿಇಒ ಸ್ವರೂಪ ಟಿ.ಕೆ. ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಕರ್ನಾಟಕ ಗ್ರಾಮ ಸ್ವರಾಜ್​ ಅಭಿಯಾನದ ರಾಜ್ಯ ಸಂಚಾಲಕಿ ಕೆ. ಚಿತ್ರಾವತಿ, ಕರ್ನಾಟಕ ಗ್ರಾಮ ಸ್ವರಾಜ್​ ಅಭಿಯಾನದ ರಾಜ್ಯ ಸಮಿತಿ ಸದಸ್ಯ ಡಾ. ಮಹೇಂದ್ರಕುಮಾರ, ಕರ್ನಾಟಕ ಗ್ರಾಮ ಸ್ವರಾಜ್​ ಅಭಿಯಾನದ ರಾಜ್ಯ ಸಮಿತಿ ಸದಸ್ಯೆ ವಿ.ಸುಶಿಲಾ ಭಾಗವಹಿಸುವರು. ಜಲ ಮತ್ತು ನೆಲ ನಿರ್ವಾಹಣೆ ಸಂಸ್ಥೆ (ವಾಲ್ಮಿ) ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಅಧ್ಯಕ್ಷತೆ ವಹಿಸುವರು.

ಕಿಡ್ಸ್​ ಸೇವಾ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕಿ ಪಂಕಜಾ ಕಲ್ಮಠ, ವೈಶಾಲಿ ಬಳೂಟಗಿ, ಕಲ್ಯಾಣ ಕಿರಣ ಸಮಾಜ ಸೇವಾ ಸಂಸ್ಥೆಯ ಬಿ.ವೈ. ಪಾಟೀಲ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.