ಜಿಲ್ಲೆ

ತೆಂಗು ಬೆಳೆ ಕುರಿತು ತರಬೇತಿ

ಎಂ.ರವಿ

ಮದ್ದೂರು: ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ತಾಲೂಕಿನ ತೆಂಗು ಬೆಳೆಗಾರರಿಗೆ ತೆಂಗು ಬೆಳೆ ಕುರಿತು ತರಬೇತಿ ಹಮ್ಮಿಕೊಂಡಿದ್ದು ಹಾಗೂ ತರಬೇತಿಯ ನಂತರ ಭಾಗವಹಿಸಿದ ಮೊದಲ 30 ರೈತರಿಗೆ ಉಚಿತವಾಗಿ ತೆಂಗಿನ ಮರ ಹತ್ತುವ ಯಂತ್ರವನ್ನು ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಕೆ.ಎಂ.ರೇಖಾ ತಿಳಿಸಿದ್ದಾರೆ.

ತರಬೇತಿಯಲ್ಲಿ ಭಾಗವಹಿಸುವ ಆಸಕ್ತಿ ಹೊಂದಿರುವ ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ಪ್ರತಿಯೊಂದಿಗೆ ಸೆ.4 ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕರ ಕಚೇರಿ ತೋಟಗಾರಿಕೆ ಇಲಾಖೆ, ಮದ್ದೂರು ಇಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೋರಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೇವಿನ ಎಣ್ಣೆ ವಿತರಣೆ: ತಾಲೂಕಿನಾದ್ಯಂತ ತೆಂಗಿನ ತೋಟಗಳಿಗೆ ತಗಲುವ ಕಪ್ಪು ತಲೆ ಹುಳುಗಳ ಭಾದೆಗೊಳಗಾದ ತೆಂಗಿನ ತೋಟಗಳಿಗೆ ಹುಳಗಳನ್ನು ನಿಯಂತ್ರಿಸಲು ಬೇವಿನ ಎಣ್ಣೆಯನ್ನು ತೋಟಗಾರಿಕೆ ಇಲಾಖೆ ವತಿಯಿಂದ ವಿತರಿಸುತ್ತಿದ್ದು ಕೀಟ ಬಾಧೆಗೊಳಗಾದ ತೆಂಗಿನ ತೋಟಗಳ ಮಾಲೀಕರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ಪ್ರತಿಯೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕರ ಕಚೇರಿ ತೋಟಗಾರಿಕೆ ಇಲಾಖೆ, ಮದ್ದೂರು ಕಚೇರಿಯನ್ನು ಸಂರ್ಪಕಿಸಲೂ ಕೋರಲಾಗಿದೆ.