ಚಿಕ್ಕಮಳಲಿ ಗ್ರಾಮದ ಜಮೀನಿನಲ್ಲಿನ ಬಾಳೆ ಬೆಳೆ. 
ಜಿಲ್ಲೆ

ಬಾಳೆ ಕೃಷಿಯಲ್ಲಿ ಸುಧಾರಿತ ಉತ್ಪಾದನಾ ತಾಂತ್ರಿಕತೆಗಳ ಕುರಿತು ರೈತರಿಗೆ ತರಬೇತಿ

ಮೈಸೂರಿನ ಇಲವಾಲದ ಹತ್ತಿರದ ಯಲಚಹಳ್ಳಿಯಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಜುಲೈ 26 ರಂದು ಬೆಳಿಗ್ಗೆ 10.30 ಗಂಟೆಗೆ ರೈತರಿಗಾಗಿ “ಬಾಳೆ ಕೃಷಿಯಲ್ಲಿ ಸುಧಾರಿತ ಉತ್ಪಾದನಾ ತಾಂತ್ರಿಕತೆಗಳು” ಕುರಿತಾದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ಕಾರ್ಯಕ್ರಮದಲ್ಲಿ ನುರಿತ ವಿಜ್ಞಾನಿಗಳು ಹಾಗೂ ಅನುಭವಿ ಕೃಷಿಕರು, ಗುಣಮಟ್ಟದ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ರೈತರು ಎದುರಿಸುವ ಹಲವಾರು ಸಮಸ್ಯೆ ಮತ್ತು ಅದರ ಪರಿಹಾರದ ಕುರಿತು ಮಾಹಿತಿ ನೀಡುವರು.

 ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಮತ್ತು ಇತರೆ ಜಿಲ್ಲೆಗಳಿಗೆ ಸೇರಿದ ಆಸಕ್ತ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಪೂರ್ವ ನೋಂದಣಿ ಮಾಡಿಸಬಹುದಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ನೋಂದಣಿಗಾಗಿ 8147959226 ಮತ್ತು 9341997297 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ವಿಷ್ಣುವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.