ಜಿಲ್ಲೆ

ಸ್ವಂತ ಉದ್ಯೋಗ ಆರಂಭಿಸುವವರಿಗೆ ಅವಕಾಶ: ನ.20ರಂದು ನಗರದಲ್ಲಿ ತರಬೇತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್) ಧಾರವಾಡ ಸಹಯೋಗದಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸಲು ಇಚ್ಛಿಸುವವರಿಗೆ ನ.20ರಂದು ನಗರದಲ್ಲಿ ತರಬೇತಿ ಆಯೋಜಿಸಲಾಗಿದೆ.

10 ದಿನ ತರಬೇತಿಯಲ್ಲಿ ಸ್ವಂತ ಉದ್ಯೋಗ ಯೋಜನೆ, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ, ಹಾಗೂ ಉದ್ಯಮ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುವುದು. ಆಸಕ್ತ 18 ವರ್ಷದಿಂದ 45 ವರ್ಷದೊಳಗಿನವರು ಹಾಗೂ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವವರು ನ.18ರೊಳಗೆ ಜಂಟಿ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಮೊ.ಸಂ 9008194396 ಹಾಗೂ 7760145784 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.