ಶೇಡಬಾಳ ಗ್ರಾಮಕ್ಕೆ ಆಗಮಿಸಿದ ಆರತಿ ತಳವಾರ ಅವರನ್ನು ಸತ್ಕರಿಸಲಾಯಿತು. ತಾಪಂ ವಸಂತ ಖೋತ, ಪಪಂ ಸದಸ್ಯ ಸದಸ್ಯ ವೃಷಭ ಚೌಗಲಾ, ವಿನೋದ ಬರಗಾಲೆ, ಶಾಂತಿನಾಥ ಮಾಲಗಾಂವೆ ಇತರರಿದ್ದರು. 
ಜಿಲ್ಲೆ

ತರಬೇತಿ ಮುಗಿಸಿದ ಯೋಧೆಗೆ ಸನ್ಮಾನ

ಕಾಗವಾಡ: ಕಳೆದ ವರ್ಷ ಭಾರತೀಯ ಸೇನೆಗೆ ಆಯ್ಕೆಯಾಗಿದ್ದ ಶೇಡಬಾಳ ಪಟ್ಟಣದ ಆರತಿ ಜಬರಸ್ತ ತಳವಾರ ಬೆಂಗಳೂರಿನಲ್ಲಿ 9 ತಿಂಗಳ ತರಬೇತಿ ಮುಗಿಸಿಕೊಂಡು ಮರಳಿದ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಸನ್ಮಾನಿಸಿ ಬರಮಾಡಿಕೊಂಡರು.

ತಾಪಂ ವಸಂತ ಖೋತ, ಪಪಂ ಸದಸ್ಯ ಸದಸ್ಯ ವೃಷಭ ಚೌಗಲಾ ಮಾತನಾಡಿದರು. ವಿನೋದ ಬರಗಾಲೆ, ಶಾಂತಿನಾಥ ಮಾಲಗಾಂವೆ, ಪ್ರಕಾಶ ಮಾಳಿ, ಶ್ರೀನಿವಾಸ ಕಾಂಬಳೆ, ಸಂತೋಷ ಮುಜಾವರ, ರವಿ ಕಾಂಬಳೆ, ಪಿಂಟು ಶಿಂಧೆ, ರತ್ನಪ್ಪಗೋಳ, ಅಣ್ಣಾಸಾಬ ಕಲಾಲ, ಶಾಂತಿನಾಥ ಉಪಾಧ್ಯೆ, ಸುರೇಂದ್ರ ಮಗದುಮ್ಮ, ಸಚಿನ ಕುಸನಾಳೆ, ಸುರೇಶ ಸಮಾಜ ಇತರರು ಇದ್ದರು.