ಸಂಜೀವಿನಿ ಯೋಜನೆಯ ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಸೋಮವಾರ ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ತಾಪಂ ಇಒ ದುಂಡಪ್ಪ ತುರಾದಿ ಉದ್ಘಾಟಿಸಿದರು. ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುನೀಲ್​, ವಲಯ ಮೇಲ್ವಿಚಾರಕ ವೆಂಕಟೇಶ, ರಾಧಾ, ತಾಲೂಕು ಸಂಪನ್ಮೂಲ ವ್ಯಕ್ತಿ ಶ್ರೀದೇವಿ, ಸವಿತಾ ಇದ್ದರು. 
ಜಿಲ್ಲೆ

ಸಂಪನ್ಮೂಲ ವ್ಯಕ್ತಿಗಳು ಉತ್ತಮ ಸೇವೆ ನೀಡಿ

Kopala - Raveendra V K

ಕೊಪ್ಪಳ: ಪಂಚಾಯತ್​ ರಾಜ್​ ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳ ಒಗ್ಗೂಡುಸುವಿಕೆಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಪಾತ್ರ ಮುಖ್ಯ ಎಂದು ತಾಪಂ ಇಒ ದುಂಡಪ್ಪ ತುರಾದಿ ಹೇಳಿದರು.

ನಗರದ ತಾಪಂ ಸಾಮರ್ಥ್ಯ ಸೌಧದಲ್ಲಿ ಸಂಜೀವಿನಿ ಯೋಜನೆಯ ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಪಂಚಾಯಿತ್​ ರಾಜ್​ ಸಂಸ್ಥೆ ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳ ಒಗ್ಗೂಡಿಸುವಿಕೆ ಯೋಜನೆಯನ್ನು ಕೊಪ್ಪಳ ಮತ್ತು ಗಂಗಾವತಿ ತಾಲೂಕಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಕೊಪ್ಪಳ ತಾಲೂಕಿನ ಆಯ್ದ 10 ಗ್ರಾಮ ಪಂಚಾಯತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ನಿಮ್ಮ ಪಾತ್ರ ಮಹತ್ವವಾಗಿದ್ದು, ಉತ್ತಮವಾಗಿ ಕೆಲಸ ಮಾಡಿ. ಕೇರಳದಲ್ಲಿ ಯೋಜನೆ ಉತ್ತಮವಾಗಿ ಅನುಷ್ಠಾನಗೊಂಡಿದೆ. ನಮ್ಮಲ್ಲೂ ಉತ್ತಮವಾಗಿ ಅನುಷ್ಠಾನಗೊಳಿಸಿ. ಗ್ರಾಮೀಣ ಭಾಗದ ಪ್ರತಿ ಬಡ ಕುಟುಂಬಕ್ಕೆ ಸೌಲಭ್ಯಗಳನ್ನು ದೊರಕಿಸಿಕೊಡಿ ಎಂದರು.

ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುನೀಲ್​, ವಲಯ ಮೇಲ್ವಿಚಾರಕ ವೆಂಕಟೇಶ, ರಾಧಾ, ತಾಲೂಕು ಸಂಪನ್ಮೂಲ ವ್ಯಕ್ತಿ ಶ್ರೀದೇವಿ, ಸವಿತಾ ಇತರರಿದ್ದರು.