ಮುದ್ದೇಬಿಹಾಳ ಪಟ್ಟಣದ ಎಂಜಿವಿಸಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಎಂಜಿವಿಸಿ ಬಿಎಡ್ ಕಾಲೇಜಿನ ಪೌರತ್ವ ತರಬೇತಿ ಶಿಬಿರದಲ್ಲಿ ಅಶೋಕ ತಡಸದ ಜ್ಯೋತಿ ಬೆಳಗಿಸಿದರು. ಎಸ್.ಎನ್.ಪೋಲೇಶಿ, ಡಾ.ಸಿ.ಎಸ್.ಬಂಡರಗಲ್, ಬಿ.ಎನ್.ಬೋಳಿಶೆಟ್ಟಿ, ಎನ್.ಟಿ.ಗೌಡರ, ಮಂಜುಳಾ ದೊಡಮನಿ, ಬಿ.ಎಸ್.ಓದುಸೋಮಠ, ಎಚ್.ಡಿ.ನದಾ ಇತರರಿದ್ದರು.  
ಜಿಲ್ಲೆ

ಪ್ರಶಿಕ್ಷಣಾರ್ಥಿಗಳು ಸಮಯಪ್ರಜ್ಞೆ ಬೆಳೆಸಿಕೊಳ್ಳಲಿ

ಮುದ್ದೇಬಿಹಾಳ: ಪ್ರಶಿಕ್ಷಣಾರ್ಥಿಗಳು ಸಮಾಜಸೇವೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಪೌರತ್ವ ತರಬೇತಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಂಜಿವಿಸಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಎಸ್.ಎನ್.ಪೋಲೇಶಿ ಹೇಳಿದರು.

ಇಲ್ಲಿನ ಎಸ್‌ಜಿವಿಸಿ ವಿದ್ಯಾಪ್ರಸಾರಕ ಟ್ರಸ್ಟ್‌ನ ಎಂಜಿವಿಸಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 3 ದಿನಗಳ ಎಂಜಿವಿಸಿ ಬಿಎಡ್ ಕಾಲೇಜಿನ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು.

ಭವಿಷ್ಯದ ಶಿಕ್ಷಕರಾಗಿರುವ ಪ್ರಶಿಕ್ಷಣಾರ್ಥಿಗಳು ಶಿಸ್ತು, ಸಂಯಮ, ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ಬಿಎಡ್ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್.ಬಂಡರಗಲ್ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಮುಂದಿನ ದಿನಗಳಲ್ಲಿ ಶಿಕ್ಷಕರಾಗಿ ಸಮೀಕ್ಷಾ ಕಾರ್ಯ, ಚುನಾವಣಾ ಪ್ರಕ್ರಿಯೆ, ಪರಿಸರ ಸಂರಕ್ಷಣೆ ಸೇರಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಂಥ ಶಿಬಿರಗಳು ಸಹಕಾರಿಯಾಗಿರಲಿವೆ ಎಂದರು.

ಟ್ರಸ್ಟ್‌ನ ಕಾರ್ಯಾಧ್ಯಕ್ಷ ಅಶೋಕ ತಡಸದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಶಿಬಿರದ ಮೂಲಕ ಶಿಸ್ತು ಬೆಳೆಸಿಕೊಂಡು ಸಾಂಕ ಜೀವನದ ಮಹತ್ವ, ಪರಿಸರ ಬಗೆಗಿನ ಕಾಳಜಿ, ಒಗ್ಗಟ್ಟಿನ ಮನೋಭಾವ ಅಳವಡಿಸಿಕೊಂಡು ಸಮಾಜಕ್ಕೆ ಉಪಯುಕ್ತ ಶಿಕ್ಷಕರಾಗಿ ಹೊರಹೊಮ್ಮಬೇಕು ಎಂದರು.

ಸಹಾಯಕ ಪ್ರಾಧ್ಯಾಪಕ ಬಿ.ಎನ್.ಬೋಳಿಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ದೊಡಮನಿ ಪ್ರಾರ್ಥಿಸಿದರು. ಎನ್.ಟಿ.ಗೌಡರ ಸ್ವಾಗತಿಸಿದರು. ಎಚ್.ಡಿ.ನದಾ ನಿರೂಪಿಸಿದರು. ಬಿ.ಎಸ್.ಓದುಸೋಮಠ ವಂದಿಸಿದರು.