ಜಿಲ್ಲೆ

ರೈಲು ಸಂಚಾರ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ನಿಲ್ದಾಣದ 3ನೇ ಪ್ರವೇಶದ್ವಾರದ 6ನೇ ಪ್ಲಾಟ್​ಫಾಮರ್್​ನಿಂದ ವಿಜಯಪುರ - ಎಸ್​ಎಸ್​ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೇಷಲ್ ರೈಲು ಹಾಗೂ ಎಸ್​ಎಸ್​ಎಸ್ ಹುಬ್ಬಳ್ಳಿ - ವಿಜಯವಾಡ ಎಕ್ಸ್​ಪ್ರೆಸ್ ರೈಲುಗಳು ಮಾ. 1 ರಿಂದ ಸಂಚಾರ ಪ್ರಾರಂಭಿಸಲಿವೆ.

ನಿಲುಗಡೆ ಮುಂದುವರಿಕೆ : ಎಸ್​ಎಸ್​ಎಸ್ ಹುಬ್ಬಳ್ಳಿ- ಕಾರಟಗಿ- ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲಿನ ಹಳ್ಳಿಗುಡಿ ಹಾಲ್ಟ್ ನಿಲ್ದಾಣದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ಸೌಲಭ್ಯವನ್ನು ಆಗಷ್ಟ್ 31ರವರೆಗೆ ಮುಂದುವರಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಕಚೇರಿ ಪ್ರಕಟಣೆ ತಿಳಿಸಿದೆ.