ರಾಣೆಬೆನ್ನೂರ: ಚಲಿಸುವ ರೈಲಿಗೆ ಬಿದ್ದು ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಬುಧವಾರ ತಾಲೂಕಿನ ದೇವರಗುಡ್ಡ ಮತ್ತು ನಗರ ರೈಲ್ವೆ ನಿಲ್ದಾಣಗಳ ನಡುವೆ ಸಂಭವಿಸಿದೆ.
ಮೃತನು ಸುಮಾರು 25ರಿಂದ 30 ವರ್ಷದವನಿದ್ದು ಎಣ್ಣೆಗೆಂಪು ಮೈಬಣ್ಣ, ಸಾದಾರಣ ಮೈಕಟ್ಟು, ಎಡಗೈ ತೋಳಿನ ಮೇಲೆ ಕನಕದಾಸರ ಹಚ್ಚೆ ಹಾಕಿಸಿರುತ್ತಾನೆ. ಕೊರಳಲ್ಲಿ ರಾಯಣ್ಣನ ತಾಯತವಿದ್ದು ಎಡ ಭಾಗದ ಕಿವಿಯಲ್ಲಿ ಒಂದು ರಿಂಗು ಹಾಕಿಕೊಂಡಿರುತ್ತಾನೆ. ಮೈಮೇಲೆ ಒಂದು ಚಾಕಲೇಟ್ ಬಣ್ಣದ ಅಂಗಿ, ಹಳದಿ ಬಣ್ಣದ ಅಂಡರ್ ವೇಯರ್, ಒಂದು ಲುಂಗಿ ಮತ್ತು ಒಂದು ಟಾವೆಲ್ ಧರಿಸಿರುತ್ತಾನೆ. ಈ ಕುರಿತು ಹುಬ್ಬಳ್ಳಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.