ಸಾಂದರ್ಭಿಕ ಚಿತ್ರ 
ಜಿಲ್ಲೆ

5 ದಿನ ಹಸಿರು ಮಾರ್ಗ ಮೆಟ್ರೋ ಸಂಚಾರ ಸ್ಥಗಿತ; ಈ ನಿಲ್ದಾಣಗಳ ನಡುವೆ ಓಡಾಟ ಬಂದ್‌

ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಆಗಸ್ಟ್‌ 20 (ಮಂಗಳವಾರ) ಸೇರಿದಂತೆ ಒಟ್ಟು ಐದು ದಿನಗಳ ಮೆಟ್ರೋ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಯಾವ ಮಾರ್ಗದಲ್ಲಿ ಯಾವ ದಿನ ವ್ಯತ್ಯಯ ಆಗಲಿದೆ ಎನ್ನುವ ಬಗ್ಗೆ ಬಿಎಂಆರ್‌ಸಿಎಲ್‌  ಮಾಹಿತಿಯನ್ನು  ನೀಡಿದೆ.

ಯಾವೆಲ್ಲಾ ದಿನ ಸಂಚಾರ ವ್ಯತ್ಯಯ? : ಆಗಸ್ಟ್‌ 20, ಆಗಸ್ಟ್‌ 23, ಆಗಸ್ಟ್‌ 30, ಸೆಪ್ಟೆಂಬರ್‌ 6, ಸೆಪ್ಟೆಂಬರ್‌ 11 ಪೂರ್ಣ ದಿನ ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರವರೆಗೂ ರೈಲುಗಳ ಸಂಚಾರ ಇರುವುದಿಲ್ಲ.

ವಿಸ್ತರಿಸಿದ ಹಸಿರು ಮಾರ್ಗದ ನಾಗಸಂದ್ರದಿಂದ ಮಾದವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆಯನ್ನು ಮುಂದುವರಿಸಲು, ಕೆಲವು ದಿನಗಳಂದು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ. ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರೀ ಕಡೆಗೆ:

1. ದಿನಾಂಕ 24ನೇ ಆಗಸ್ಟ್ 2024 ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಕ್ಕೆ ಬದಲಾಗಿ 10.00 ಗಂಟೆಗೆ ಪ್ರಾರಂಭವಾಗಲಿದೆ.

2. ದಿನಾಂಕ 25ನೇ ಆಗಸ್ಟ್ 2024 ರಂದು ಮೊದಲ ರೈಲು ಸೇವೆಯು ಬೆಳಿಗ್ಗೆ 5.00 ಕ್ಕೆ ಬದಲಾಗಿ 06.00 ಕ್ಕೆ ಪ್ರಾರಂಭವಾಗಲಿದೆ.

ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಕಡೆಗೆ:

1. ದಿನಾಂಕ 24ನೇ ಆಗಸ್ಟ್ 2024 ರಂದು ಕೊನೆಯ ರೈಲು ಸೇವೆಯು ರಾತ್ರಿ 11.12 ಕ್ಕೆ ಪ್ರಾರಂಭವಾಗಲಿದೆ.

2. ದಿನಾಂಕ 25ನೇ ಆಗಸ್ಟ್ 2024 ರಂದು ಮೊದಲ ರೈಲು ಸೇವೆಯು ಬೆಳಿಗ್ಗೆ 05.00 ಕ್ಕೆ ಪ್ರಾರಂಭವಾಗಲಿದೆ.

ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.