ಹುಬ್ಬಳ್ಳಿ : ಅರಸಿಕೆರೆ ಯಾರ್ಡ್ನಲ್ಲಿ ಕೈಗೊಂಡಿರುವ ಸುರಕ್ಷತೆ ಮತ್ತು ನಿರ್ವಹಣೆ ಕಾಮಗಾರಿಯಿಂದಾಗಿ ವಿವಿಧ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಆ. 26, ಸೆ. 2, 9, 16, 21, 23, 28, 30, ಅ. 5 ಮತ್ತು 14ರಂದು ಎಸ್ಎಸ್ಎಸ್ ಹುಬ್ಬಳ್ಳಿ -ಅರಿಸಿಕೆರೆ ಡೈಲಿ ಎಕ್ಸ್ಪ್ರೆಸ್ ರೈಲು ಸಂಚಾರ ಬಿರುರ-ಅರಸಿಕೆರೆ ಮಧ್ಯೆ ರದ್ದುಗೊಳ್ಳಲಿದೆ.
ಆ. 27, ಸೆ. 3, 10, 17, 22, 24, 29, ಅ. 1, 6 ಮತ್ತು 15ರಂದು ಅರಸಿಕೆರೆ - ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಸಂಚಾರ ಅರಸಿಕೆರೆ- ಬಿರುರ ಮಧ್ಯೆ ರದ್ದುಗೊಳ್ಳಲಿದೆ.
ನಿಲುಗಡೆ ಮುಂದುವರಿಕೆ : ಎಸ್ಎಸ್ಎಸ್ ಹುಬ್ಬಳ್ಳಿ - ಸಿಂಧನೂರ ಡೈಲಿ ಪ್ಯಾಸೆಂಜರ್ ಸ್ಪೇಷಲ್ ರೈಲಿಗೆ ಹಳ್ಳಿಗುಡಿ ನಿಲ್ದಾಣದಲ್ಲಿ ಸೆ. 1 ರಿಂದ 2025ರ ಫೆ. 28ರವರೆಗೆ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ಸೌಲಭ್ಯವನ್ನು ಮುಂದುವರೆಸಲಾಗಿದೆ.
ತಡವಾಗಿ ಸಂಚಾರ : ಕುಸುಗಲ್ಲ ಮತ್ತು ಹೆಬಸೂರ ನಿಲ್ದಾಣದ ಮಧ್ಯೆ ಹಳಿ ನಿರ್ವಹಣೆ ಹಿನ್ನೆಲೆಯಲ್ಲಿ ಆ. 20 ಮತ್ತು 22ರಂದು ಸೊಲ್ಲಾಪುರ - ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೇಷಲ್ ರೈಲು ನಿಗದಿತ ಸಮಯಕ್ಕಿಂತ 60 ನಿಮಿಷ ತಡವಾಗಿ ಸಂಚರಿಸಲಿದೆ.