ಜಿಲ್ಲೆ

ವಿವಿಧ ಮಾರ್ಗಗಳಲ್ಲಿ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ

Mangaluru - Hariprasad Rai


ಮಂಗಳೂರು : ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ವಿವಿಧ ಮಾರ್ಗಗಳಲ್ಲಿ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಲಾಗಿದೆ.
ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್-ತಿರುವನಂತಪುರ ಸೆಂಟ್ರಲ್ ಎರ್ನಾಡ್ ಎಕ್ಸ್‌ಪ್ರೆಸ್ ( ರೈಲು ನಂ.16605)ಗೆ ಜೂ.9 ಮತ್ತು 10ರಂದು ಹೆಚ್ಚುವರಿಯಾಗಿ ಒಂದು ಸಾಮಾನ್ಯ ದರ್ಜೆ ಬೋಗಿ ಹಾಗೂ ತಿರುವನಂತಪುರ ಸೆಂಟ್ರಲ್‌ನಿಂದ ಹೊರಡುವ ತಿರುವನಂತಪುರ ಸೆಂಟ್ರಲ್ -ಮಂಗಳೂರು ಸೆಂಟ್ರಲ್ ಎರ್ನಾಡ್ ಎಕ್ಸ್‌ಪ್ರೆಸ್( ರೈಲು ನಂ.16606)ಗೆ ಜೂ.9, 10 ಮತ್ತು 11ರಂದು ಹೆಚ್ಚುವರಿಯಾಗಿ ಒಂದು ಸಾಮಾನ್ಯ ದರ್ಜೆ ಬೋಗಿ ಅಳವಡಿಕೆಯಾಗಲಿದೆ.
ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್-ಕೊಯಮುತ್ತೂರು ಜಂಕ್ಷನ್ ಇಂಟರ್ ಸಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ( ರೈಲು ನಂ.22609)ಗೆ ಜೂ.9 ಮತ್ತು 10ರಂದು ಹೆಚ್ಚುವರಿಯಾಗಿ ಒಂದು ಸಾಮಾನ್ಯ ದರ್ಜೆ ಬೋಗಿ ಹಾಗೂ
ಕೊಯಮುತ್ತೂರು ಜಂಕ್ಷನ್‌ನಿಂದ ಹೊರಡುವ ಕೊಯಮುತ್ತೂರು ಜಂಕ್ಷನ್-ಮಂಗಳೂರು ಸೆಂಟ್ರಲ್ ಇಂಟರ್ ಸಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ( ರೈಲು ನಂ.22610)ಗೆ ಜೂ.9, 10 ಮತ್ತು 11ರಂದು ಹೆಚ್ಚುವರಿಯಾಗಿ ಒಂದು ಸಾಮಾನ್ಯ ದರ್ಜೆ ಬೋಗಿ ಅಳವಡಿಕೆಯಾಗಲಿದೆ.
ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್-ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ( ರೈಲು ನಂ.16603)ಗೆ ಜೂ.9, 16, 23 ಮತ್ತು 30 ರಂದು ಹಾಗೂ ಜುಲೈ 7,14, 21ಮತ್ತು 28ರಂದು ಹೆಚ್ಚುವರಿಯಾಗಿ ಒಂದು 3
ಟಯರ್ ಎ.ಸಿ. ಕೋಚ್ ಬೋಗಿ ಅಳವಡಿಕೆಯಾಗಲಿದೆ. ತಿರುವನಂತಪುರ ಸೆಂಟ್ರಲ್‌ನಿಂದ ಹೊರಡುವ ತಿರುವನಂತಪುರ ಸೆಂಟ್ರಲ್ - ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ( ರೈಲು ನಂ.16604)ಗೆ ಜೂ.10, 17 ಮತ್ತು 24 ರಂದು ಹಾಗೂ ಜುಲೈ 1, 8, 15, 22ಮತ್ತು 29ರಂದು ಹೆಚ್ಚುವರಿಯಾಗಿ ಒಂದು 3 ಟಯರ್ ಎ.ಸಿ. ಕೋಚ್ ಬೋಗಿ ಅಳವಡಿಕೆಯಾಗಲಿದೆ.