ಮಂಡ್ಯ: ನಗರದಲ್ಲಿ ಅ.22ರಂದು ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.
ಸುಮಾರು 35 ರಿಂದ 40 ವರ್ಷದವನಾಗಿದ್ದು, 5.8 ಅಡಿ ಎತ್ತರವಿದ್ದಾರೆ. ಬಲಗೈ ತೋಳಿನ ಮೇಲೆ ‘ಭಾರ್ಗವಿ’ ಎಂದು ಹಚ್ಚೆ ಇದೆ. ಮೃತನ ಮೈ ಮೇಲೆ ಹಳದಿ ಬಣ್ಣದ ತುಂಬು ತೋಳಿನ ಅಂಗಿ, ಗ್ರೇ ಬಣ್ಣದ ಪ್ಯಾಂಟ್ ಇದೆ. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರಿದ್ದರೆ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.