ಬಸವರಾಜ್ ಕಲ್ಮನಿ 
ಜಿಲ್ಲೆ

ರೈಲು ಡಿಕ್ಕಿಯಾಗಿ ವೃದ್ಧ ಸಾವು

ನರೇಶ್ ಕುಮಾರ್

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಗುರುವಾರ ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಕೆವಿಒಆರ್ ಕಾಲನಿಯ ಮಲ್ಲಿಗೆವನ ನಿವಾಸಿ, ಜೆಸ್ಕಾಂ ನಿವೃತ್ತ ನೌಕರ ಬಸವರಾಜ್ ಕಲ್ಮನಿ (78) ಮೃತಪಟ್ಟಿದ್ದಾರೆ.

ಬಸವರಾಜ ಕಲ್ಮನಿ ಅವರು ಪಟ್ಟಣದ ಬಸವೇಶ್ವರ ಬಜಾರದಲ್ಲಿರುವ ಎಸ್‌ಬಿಐ ಬ್ಯಾಂಕ್‌ನಲ್ಲಿ ಹಣ ಬಿಡಿಸಿಕೊಂಡು ಮನೆಗೆ ಮರುಳುತ್ತಿರುವಾಗ ಎನ್‌ಆರ್‌ಎಸ್ ಲಾಡ್ಜ್ ಪಕ್ಕದಲ್ಲಿರುವ ರೈಲು ಹಳಿ ದಾಟುವ ವೇಳೆ ಹೊಸಪೇಟೆಯಿಂದ ದಾವಣಗೆರೆ ಕಡೆ ಹೊರಟಿದ್ದ ಪ್ರಯಾಣಿಕರ ರೈಲು ಡಿಕ್ಕಿ ಹೊಡೆದಿದ್ದು, ರುಂಡ-ಮುಂಡಗಳು ಬೇರೆ ಬೇರೆಯಾಗಿವೆ.

ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.