ಹುಬ್ಬಳ್ಳಿ : ಉಗಾರ ಖುರ್ದ್- ಕುಡಚಿ ಮಧ್ಯದ ದ್ವಿಪಥ ಮಾರ್ಗ ಕಾರ್ಯಾರಂಭದ ಹಿನ್ನೆಲೆಯಲ್ಲಿ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಸೆ. 22 ರಿಂದ 26ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ - ಮೀರಜ್ ಡೈಲಿ ಎಕ್ಸ್ಪ್ರೆಸ್ ಹಾಗೂ 23 ರಿಂದ 27ರವರೆಗೆ ಮೀರಜ್- ಎಸ್ಎಸ್ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
ಸೆ. 21 ರಿಂದ 25ರವರೆಗೆ ಕೊಲ್ಲಾಪುರ- ತಿರುಪತಿ ಹರಿಪ್ರಿಯಾ ಡೈಲಿ ಎಕ್ಸ್ಪ್ರೆಸ್ ರೈಲು ಬೆಳಗಾವಿವರೆಗೆ ಮಾತ್ರ ಸಂಚರಿಸಲಿದೆ. 22 ರಿಂದ 26ರವರೆಗೆ ಕೊಲ್ಲಾಪುರ - ತಿರುಪತಿ ಹರಿಪ್ರಿಯಾ ಡೈಲಿ ಎಕ್ಸ್ಪ್ರೆಸ್ ರೈಲು ಬೆಳಗಾವಿಯಿಂದ ಸಂಚಾರ ಪ್ರಾರಂಭಿಸಲಿದೆ.
ಮೀರಜ್ - ಕೆಎಸ್ಆರ್ ಬೆಂಗಳೂರು ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲು ಸೆ. 22 ರಿಂದ 24ರವರೆಗೆ 40 ನಿಮಿಷ ಹಾಗೂ 26 ರಂದು 60 ನಿಮಿಷ ತಡವಾಗಿ ಸಂಚರಿಸಲಿದೆ.