ಗಬ್ಬೂರು ರಾಜ್ಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು. 
ಜಿಲ್ಲೆ

ಟ್ರಯಲ್ ವೇಳೆ ಹೊತ್ತಿ ಉರಿದ ಕಾರು

ನರೇಶ್ ಕುಮಾರ್

ದೇವದುರ್ಗ: ತಾಲೂಕಿನ ಗಬ್ಬೂರು ಪಟ್ಟಣದ ಕಲ್ಮಲಾ-ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿ ಮಧ್ಯೆ ಭಾನುವಾರ ಸಂಜೆ ಕಾರು ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಪಂಢರಾಪುರದ ನವೀನ್‌ಕುಮಾರ ಸ್ವಾಮಿ ಅವರ ಡಸ್ಟರ್ ಕಂಪನಿ ಕಾರು ಸುಟ್ಟಿದೆ. ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಪಂಢರಾಪುರದ ನವೀನ್‌ಕುಮಾರ್ ಎನ್ನುವವರು ಕೆಲಸ ನಿಮಿತ್ತ ಗಬ್ಬೂರುಗೆ ಬಂದಿದ್ದರು. ಹಿರೇಬೂದೂರು ಗ್ರಾಮದ ರೆಡ್ಡಿ ಎನ್ನುವವರು ಕಾರು ಖರೀದಿಸಲು ಟ್ರಯಲ್ ನೋಡುವಾಗ ಘಟನೆ ನಡೆದಿದೆ.

ಇಂಜಿನ್ ಹೀಟ್‌ಆಗಿ ಬೆಂಕಿ ಕಿಡಿ ಕಾಣಿಸಿಕೊಂಡಿದ್ದು ಕಾರಿನಲ್ಲಿ ಇದ್ದವರು ತಕ್ಷಣ ಇಳಿದು ಪಾರಾಗಿದ್ದಾರೆ. ಕಾರು ನಡುರಸ್ತೆಯಲ್ಲಿ ಧಗಧಗಿಸಿ ಉರಿದಿದ್ದು ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿ ರವಿಕುಮಾರ ತಿಳಿಸಿದ್ದಾರೆ.