ಜಿಲ್ಲೆ

ಬೆಂಗಳೂರಿನಲ್ಲಿ ಒಂದೇ ಬೈಕ್ ಮೇಲೆ 99 ಕೇಸ್, 56 ಸಾವಿರ ದಂಡ..

ಬೆಂಗಳೂರು: ಬೆಂಗಳೂರಿನ ಯುವಕನೊಬ್ಬ 99 ಬಾರಿ ಟ್ರಾಫಿಕ್‌ ನಿಯಮ ಉಲ್ಲಂಘನೆಯಿಂದ 56 ಸಾವಿರ ರೂಪಾಯಿ ದಂಡ ಪಾವತಿಯನ್ನು ಆತ ಬಾಕಿ ಇರಿಸಿಕೊಂಡಿದ್ದ ಎನ್ನಲಾಗಿದೆ.  ಹೆಲ್ಮೆಟ್​​ ಹಾಕದೆ ಸಿಗ್ನಲ್​ಗಳ ನಿಯಮ ಪಾಲಿಸದೆ ವಾಹನ ಚಲಾಯಿಸುತ್ತಿದ್ದನು. ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಬೈಕ್‌ ಸವಾರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಬಳಕೆದಾರರೊಬ್ಬರು ವೇಗಾ ಸಿಟಿ ಜಂಕ್ಷನ್ ಬಳಿ ತಪ್ಪು ದಾರಿಯಲ್ಲಿ ಸವಾರಿ ಮಾಡುತ್ತಿದ್ದ ಇದೇ ಬೈಕ್‌ ಸವಾರನ ವೀಡಿಯೊವನ್ನು ಅಪ್‌ಲೋಡ್ ಮಾಡಿದ ನಂತರ ಬೈಕ್ ಸವಾರನನ್ನು ಬಂಧಿಸಲಾಗಿದೆ.

ಮೈಕೋ ಲೇಔಟ್‌ ಪೊಲೀಸ್‌ ಠಾಣೆಯ ಸಿಬ್ಬಂದಿ ಬೈಕ್‌ನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದು, ಬೈಕ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಸೆಪ್ಟೆಂಬರ್ 25ರಂದು ದ್ವಿಚಕ್ರ ವಾಹನ ಸವಾರ ವೆಗಾ ಸಿಟಿ ಬಳಿ ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡಿರುವುದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದ್ವಿಚಕ್ರ ವಾಹನದ ಸಂಖ್ಯೆಯನ್ನು ಆಪ್ ಮೂಲಕ ಪರಿಶೀಲನೆ ಮಾಡಿದಾಗ 99 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪ್ರಕರಣಗಳಿದ್ದು, 56 ಸಾವಿರ ರೂಪಾಯಿ ದಂಡ ಕಟ್ಟಬೇಕಾಗಿರುವುದು ಬೆಳಕಿದೆ ಬಂದಿದೆ. ಈ ಎಲ್ಲಾ ಮಾಹಿತಿಯನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಚಾರ ಪೊಲೀಸರಿಗೆ ಮನವಿ ಮಾಡಿದ್ದರು.

ಇದನ್ನು ನೋಡಿದ ತಕ್ಷಣ ಕಾರ್ಯಪ್ರವೃತ್ತರಾದ ಬೆಂಗಳೂರು ದಕ್ಷಿಣ ಸಂಚಾರ ಪೊಲೀಸರು ದ್ವಿಚಕ್ರ ವಾಹನ ಮತ್ತು ಸವಾರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಸಂಚಾರ ಡಿಸಿಪಿ ತಮ್ಮ ಎಕ್ಸ್ (ಟ್ವಿಟರ್ ಖಾತೆಯಲ್ಲಿ) ಹಂಚಿಕೊಂಡಿದ್ದಾರೆ.

ಬೈಕ್ ನಂಬರ್ ಪರಿಶೀಲಿಸಿ ಸವಾರನ ಪತ್ತೆ ಹಚ್ಚಿದ ಟ್ರಾಫಿಕ್ ಪೊಲೀಸರು. ಮೈಕೋ ಲೇಔಟ್ ಸಂಚಾರ ಪೊಲೀಸರಿಂದ ಬೈಕ್ ಪತ್ತೆಯಾಗಿದೆ. 99 ಕೇಸ್ ಇದ್ದ ಬೈಕ್ ವಶಕ್ಕೆ ಪಡೆದ ಟ್ರಾಫಿಕ್ ಪೊಲೀಸರು ಮೋಟಾರು ವಾಹನ ಕಾಯ್ದೆಯಡಿ ಮೈಕೋ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.