ಜಿಲ್ಲೆ

ಮದ್ಯ ಅಕ್ರಮವಾಗಿ ಸಾಗಿಸುತ್ತಿದ್ದವನ ಬಂಧನ

ಸೌಮ್ಯ ಆರ್

ಕಾಸರಗೋಡು: ಮದ್ಯ ಅಕ್ರಮವಾಗಿ ಸಾಗಿಸುತ್ತಿದ್ದ ನೆಲ್ಕಳ ನಿವಾಸಿಯನ್ನು ಅಬಕಾರಿ ನಿರೀಕ್ಷಕ ಜೋಸೆಫ್ ಜೆ. ಮತ್ತು ತಂಡ ಬಂಧಿಸಿದೆ. ಸಂತೋಷ್ ಕೆ. ಬಂಧಿತನಾದವನು. ಜಿಲ್ಲಾ ಅಬಕಾರಿ ರೇಂಜ್ ಕಚೇರಿಯಿಂದ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ತಪಾಸಣೆ ವೇಳೆ ಸಿಕ್ಕಿಬಿದ್ದ ಆರೋಪಿ ಬಳಿಯಿಂದ 1.620 ಲೀ.ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ನಿರೀಕ್ಷಕ ಎ.ವಿ.ರಾಜೀವನ್, ಸಿಇಒಗಳಾದ ಬಾಬು, ಮುರಳಿ, ಪ್ರಿವೆಂಟಿವ್ ಆಫೀಸರ್, ಚಾಲಕ ಸುಮೋದ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.