ಜಿಲ್ಲೆ

Traffic stopped ಈ ಸೇತುವೆಯಲ್ಲಿ ವಾಹನ ಸಂಚಾರ 1-2 ದಿನದಲ್ಲಿ ಸ್ಥಗಿತ

Uttara Kannada - Subash Hegde

ಕಾರವಾರ: ತಾತ್ಕಾಲಿಕವಾಗಿ ಪ್ರಾರಂಭವಾಗಿದ್ದ ವಾಹನ ಸಂಚಾರವನ್ನು ಬಂದ್ ಮಾಡಿ (Traffic stopped) ಶೀಘ್ರ ಗಂಗಾವಳಿ-ಮಂಜಗುಣಿ ಸೇತುವೆಯ ಪಿಚ್ಚಿಂಗ್ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು  ಎಂದು ಶಾಸಕ ಸತೀಶ ಸೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದೆ 2013-18 ಶಾಸಕನಾಗಿದ್ದ ಅವಧಿಯಲ್ಲಿ ಮಂಜುಗುಣಿ, ಕೆರವಡಿ, ಕಡಿಯೇ, ಕರ್ಕಲ್, ಖಾರ್ಗೆಜೂಗ್ ಹಾಗೂ ಹಿಣೇಬೈಲ್ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿತ್ತು. ಕೆಆರ್‌ಡಿಸಿಎಲ್ ಕಾಮಗಾರಿ ಮಾಡಿಸುವ ಜವಾಬ್ದಾರಿ ಹೊತ್ತಿತ್ತು. ಕೆರವಡಿ-ಉಳಗಾ ಹಾಗೂ ಮಂಜಗುಣಿ-ಗಂಗಾವಳಿ ಸೇತುವೆ ಕಾಮಗಾರಿಯನ್ನು ಡಿ.ಆರ್. ನಾಯ್ಕ ಕನ್ಸ್‌ಸ್ಟ್ರಕ್ಷನ್‌ ಕಂಪನಿ ಟೆಂಡರ್ ಪಡೆದು ಕೆಲಸ ಶುರು ಮಾಡಿತ್ತು. ಆದರೆ, 2018 ರಿಂದ 2023 ರವರೆಗೆ ಶಾಸಕರಾಗದವರು ಮುತುವರ್ಜಿ ವಹಿಸದ ಕಾರಣ ಕಾಮಗಾರಿಗಳು ಸ್ಥಗಿತವಾಗಿ ಸುಮಾರು ನಾಲ್ಕು ವರ್ಷಗಳು ಕಳೆದವು. 2023ರಲ್ಲಿ ಪುನಃ ಶಾಸಕನಾಗಿ ಆಯ್ಕೆಯಾದ ನಂತರ, ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಬೇಕಿರುವುದನ್ನು ಮನಗಂಡು, ಸಿಎಂ ಅವರಲ್ಲಿ ಮನವಿ ಮಾಡಿ ಹೆಚ್ಚುವರಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದೇನೆ.

Traffic  stopped ಏಕೆ..?

19.70 ಕೋಟಿ ರೂ.ಗಳನ್ನು ನವೆಂಬರ್ 29 ರಂದು ಕೆಆರ್‌ಡಿಸಿಎಲ್ 2021 ರ ಎಸ್‌ಆರ್ ದರದಲ್ಲಿ ಮಂಜೂರು ಮಾಡಿದ್ದಾರೆ. ಮಂಜಗುಣಿ ಸೇತುವೆಗೆ 2025 ರ ಫೆಬ್ರವರಿ, ಉಳಗಾ ಸೇತುವೆಗೆ 20205 ರ ಮಾರ್ಚ್ ಅಂತ್ಯದವರೆಗೆ ಕಾಮಗಾರಿ ಮುಗಿಸಲು ಅಂತಿಮ ಗಡುವು ನೀಡಿದ್ದಾರೆ. ಉಳಗಾ-ಕೆರವಡಿ ನಡುವೆ ಸೇತುವೆಗೆ ಮಣ್ಣು ಹಾಕುವ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ಅಡೆತಡೆ ಮಾಡದೇ ಸಹಕಾರ ನೀಡಬೇಕು ಎಂದು ಸೈಲ್ ವಿನಂತಿಸಿದ್ದಾರೆ. ಹಿಂದಿನ ಶಾಸಕರ ನಿರ್ಲಕ್ಷ್ಯದಿಂದ ಸೇತುವೆ ಕಾಮಗಾರಿ ವಿಳಂಬವಾಗಿದ್ದು, ಸರ್ಕಾರಕ್ಕೆ 19.70 ಕೋಟಿ ರೂ. ನಷ್ಟವಾಗಿದೆ ಎಂದು ಸೈಲ್ ಆರೋಪಿಸಿದ್ದಾರೆ.