ಬೀಳಗಿಯಲ್ಲಿ ಪೊಲೀಸ್ ಠಾಣೆ ವೃತ್ತ ಅಧೀಕ್ಷಕ ಹನುಮಂತ ಸಣ್ಣಮನಿ ನೇತೃತ್ವದಲ್ಲಿ ಪೊಲೀಸರು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಸವಾರಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಸಿಪಿಐ ಎಚ್. ಸಣ್ಣಮನಿ, ಪಿಎಸ್‌ಐ ದಡ್ಡಿಮನಿ, ಎಎಸ್‌ಐ ಶಾಂತಪ್ಪ ಹೊಸಮನಿ, ಆರ್.ಟಿ. ಲಮಾಣಿ ಮತ್ತಿತರರಿದ್ದಾರೆ. 
ಜಿಲ್ಲೆ

ಸಂಚಾರ ನಿಯಮ ಪಾಲನೆ ಅಗತ್ಯ

ವಿನಯ ಆಶೋಕ ನಾಯ್ಕ

ಬೀಳಗಿ: ಸ್ಥಳೀಯ ಪೊಲೀಸ್ ಠಾಣೆಯ ವೃತ್ತ ಅಧೀಕ್ಷಕ ಹನುಮಂತ ಸಣ್ಣಮನಿ ನೇತೃತ್ವದಲ್ಲಿ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ನಡೆಸಲಾಯಿತು.

ನಗರದ ಬೀಳಗಿ ಕ್ರಾಸ್ ಮಾರ್ಗವಾಗಿ ಬಾಡಂಗಡಿಯವರಗೆ ಪೊಲೀಸರು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಓಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ವೃತ್ತ ಅಧೀಕ್ಷಕ ಹನುಮಂತ ಸಣ್ಣಮನಿ ಮಾತನಾಡಿ, ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಭಾಗವಹಿಸದೆ, ಎಲ್ಲರೂ ಶಾಂತಿಯಿಂದ ಬಾಳಬೇಕು. ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮ ಪಾಲನೆ ಮಾಡಬೇಕು. ಜತೆಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದರು.

ಪಿಎಸ್‌ಐ ಎನ್.ಟಿ. ದಡ್ಡಿಮನಿ, ಎಎಸ್‌ಐ ಶಾಂತಪ್ಪ ಹೊಸಮನಿ, ಆರ್.ಟಿ. ಲಮಾಣಿ, ಎಚ್.ಕೆ. ನಾರಗಾಜ, ಎಚ್.ಕೆ. ನಾಗಠಾಣ, ಹೆಡ್ ಕಾನ್‌ಸ್ಟೇಬಲ್ ಪುರು ಲಮಾಣಿ, ಸಂಗಮೇಶ ಮಟ್ಯಲ, ಸಂಗಮೇಶ ಗಾಣಿಗೇರಿ, ಸಿದ್ರಾಮ ಕರಿಗಾರ, ಪಿ.ಸಿ. ಬಸವರಾಜ, ಬಸು ಮುದಕನ್ನವರ, ಎಲ್.ಎಚ್. ಬಾಳಾಗೋಳ ಕಾಸಿಮ ಉಕ್ಲಲಿ, ಬಸವರಾಜ ಧರ್ಮಣ್ಣವರ ಮತ್ತಿತರರಿದ್ದರು.