ಚಿಕ್ಕಬಳ್ಳಾಪುರ: ಜನರಲ್ಲಿ ಸಂಚಾರಿ ನಿಯಮಗಳ ಬಗೆಗಿನ ನಿರ್ಲಕ್ಷ್ಯ ಭಾವನೆಯಿಂದ ಅಪಘಾತಗಳು ಹೆಚ್ಚಿಗೆ ಸಂಭವಿಸುತ್ತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ವಿಷಾದಿಸಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಂಚಾರಿ ನಿಯಮಗಳ ಕುರಿತ ಜಾಗೃತಿ ಹಾಗೂ ವಾಹನ ಚಾಲನಾ ಪರವಾನಗಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು, ಇದರಲ್ಲಿ 18-25 ವಯೋಮಾನದ ಯುವಕರೇ ಶೇ.80 ಬಲಿಯಾಗುತ್ತಿದ್ದಾರೆ. ಇದಕ್ಕೆ ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವುದು ಪ್ರಮುಖ ಕಾರಣ ಎಂದರು. ಅತಿ ವೇಗದ ಚಾಲನೆ, ಹೆಲ್ಮೆಟ್ ಧರಿಸದಿರುವುದು, ಮದ್ಯ ಸೇವಿಸಿ ವಾಹನ ಚಾಲನೆ, ಸಂಚಾರಿ ಚಿಹ್ನೆ ಮತ್ತು ಸೂಚನಾ ದೀಪಗಳ ನಿರ್ದೇಶನ ಉಲ್ಲಂನೆ, ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ತೂಕ ಸಾಗಣೆ, ವಿಶ್ರಾಂತಿ ರಹಿತ ಚಾಲನೆ, ಸಮರ್ಪಕ ಚಾಲನಾ ತರಬೇತಿಯ ಕೊರತೆ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ವಾಹನಗಳ ದುಸ್ಥಿತಿ ಅಪಘಾತಗಳಿಗೆ ಪ್ರಮುಖ ಕಾರಣ ಎಂದರು.
ಸಂಚಾರಿ ನಿಯಮಗಳನ್ನು ಪಾಲಿಸದಿರುವುದು ಶಿಕ್ಷಾರ್ಹ ಅಪರಾಧ. ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಿ, ಅಪಘಾತಗಳನ್ನು ತಡೆಗಟ್ಟಬೇಕು. ಕಡ್ಡಾಯವಾಗಿ ಚಾಲನಾ ಪರವಾನಗಿ ಪತ್ರ, ವಾಹನದ ವಿಮೆ, ನೋಂದಣಿ, ವಾಯು ವಾಲಿನ್ಯ ತಪಾಸಣಾ ಪತ್ರ, ಇಂಧನ ಕ್ಷಮತೆ ಪ್ರವಾಣಪತ್ರ ಸೇರಿ ಎಲ್ಲ ದಾಖಲೆಗಳನ್ನು ಸವಾರರು ಹೊಂದಿರಬೇಕು ಎಂದರು.
ಯಾವುದೇ ಕಾರಣಕ್ಕೂ ಅಪ್ರಾಪ್ತರಿಗೆ ವಾಹನಗಳನ್ನು ಚಲಾಯಿಸಲು ನೀಡಬಾರದು. ಯಾರೇ ಸಂಚಾರಿ ನಿಯಮಗಳನ್ನು ಉಲ್ಲಂಸಿದರೂ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಡಿ.ಮಂಜುನಾಥ್ ವಾತನಾಡಿ, ಹಿಂದೆ ಆರ್‌ಟಿಒ ಕಚೇರಿಗೆ ಅಲೆದಾಟ, ನೇರ ನಗದು ಪಾವತಿ, ಅನವಶ್ಯಕವಾಗಿ ಕಾಯುವಿಕೆ ಸೇರಿ ನಾನಾ ಸಮಸ್ಯೆಗಳು ಇದ್ದವು. ಆದರೆ, ಇದೀಗ ಎಲ್ಲವೂ ಆನ್ ಲೈನ್ ಆಗಿದೆ. ಬಹುತೇಕ ಪ್ರಕ್ರಿಯೆ ಪಾರದರ್ಶಕವಾಗಿದೆ. ನೇರವಾಗಿ ಅರ್ಜಿದಾರರು ನಿರೀಕ್ಷೆಯ ಸೇವೆಯ ಸ್ಥಿತಿಗತಿಗಳ ಬಗ್ಗೆ ಪರೀಕ್ಷಿಸಿಕೊಳ್ಳಬಹುದು ಎಂದರು. ಉಪ ಪೊಲೀಸ್ ವರಿಷ್ಠಾಧಿಕಾರಿ ವಾಸುದೇವ್ ಮತ್ತಿತರರು ಇದ್ದರು.
ಕಾಲೇಜಿನಲ್ಲಿ ದೂರು ಪೆಟ್ಟಿಗೆ ವ್ಯವಸ್ಥೆ: ಕಾಲೇಜುಗಳಲ್ಲಿ ಅಹಿತಕರ ಟನೆಗಳಿಗೆ ಕಡಿವಾಣ ಹಾಕಲು ದೂರು ಪೆಟ್ಟಿಗೆ ಇಡುವುದು, ಪ್ರತಿ 15 ದಿನಕ್ಕೊಮ್ಮೆ ದೂರುಗಳನ್ನು ಪರಿಶೀಲಿಸುವುದರ ಬಗ್ಗೆ ಚರ್ಚಿಸಲಾಯಿತು. ಕಾಲೇಜುಗಳಲ್ಲಿ ಪೋಲಿ ಹುಡುಗರು ಅಸಭ್ಯವಾಗಿ ವರ್ತಿಸುವುದು, ಶಬ್ದ ವಾಲಿನ್ಯ ಉಂಟು ವಾಡುವುದು, ಹೆಣ್ಣು ಮಕ್ಕಳನ್ನು ಚುಡಾಯಿಸುವಿಕೆ ಮುಂತಾದ ಕಾನೂನು ಬಾಹಿರ ಚಟುವಟಿಕೆ ಕಂಡುಬಂದರೆ ದೂರು ಪೆಟ್ಟಿಗೆಯ ಮೂಲಕ ಕಾಲೇಜಿನ ಯಾವುದೇ ವಿದ್ಯಾರ್ಥಿ ಹೆಸರನ್ನು ಬರೆಯದೇ ಗೌಪ್ಯವಾಗಿ ಮಾಹಿತಿ ನೀಡಬಹುದು. ಇದನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸಂಚಾರಿ ನಿಯಮಗಳ ಜಾಗೃತಿ: ಕಾರ್ಯಕ್ರಮದಲ್ಲಿ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರು, ವಿದ್ಯಾರ್ಥಿಗಳಿಗೆ ಕಾನೂನು ಅರಿವಿನ ಕರಪತ್ರಗಳನ್ನು ವಿತರಿಸಿ, ಜಾಗೃತಿ ಮೂಡಿಸಲಾಯಿತು. ಕಾಲೇಜಿಗೆ ದ್ವಿಚಕ್ರ ವಾಹನಗಳಲ್ಲಿ ಬರುವ ವಿದ್ಯಾರ್ಥಿಗಳು, ನಿಯವಾನುಸಾರ ಹೊಂದಿರುವ ಅಗತ್ಯ ದಾಖಲೆ, ಸಂಚಾರಿ ನಿಯಮಗಳ ಪಾಲನೆಯ ಬಗ್ಗೆ ನಿಗಾವಹಿಸಲು ಸೂಚಿಸಲಾಯಿತು. ಕಾಲೇಜಿನಲ್ಲಿ ವಿಶೇಷ ಅಭಿಯಾನ, ಚಾಲನಾ ಪರವಾನಗಿ ವಿತರಣೆ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಲಾಯಿತು. ಸರ್ಕಾರದ ಮಹತ್ವಾಕಾಂಕ್ಷಿ ಇ-ಶ್ರಮ್ ಯೋಜನೆ, ಸವಲತ್ತುಗಳು, ನೋಂದಣಿ ಬಗ್ಗೆಯೂ ವಿವರಿಸಲಾಯಿತು.