ಮಸ್ಕಿ ಡಿಪೋದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಉಪನ್ಯಾಸಕ ಮಹಾಂತೇಶ ಮಸ್ಕಿ ಉದ್ಘಾಟಿಸಿದರು. ಡಾ.ಬಿ.ಎಚ್.ದಿವಟರ್, ಡಿಪೋ ವ್ಯವಸ್ಥಾಪಕ ಆದಪ್ಪ, ವಕೀಲ ಈಶಪ್ಪ ದೇಸಾಯಿ, ಯಂಕಪ್ಪ ಇದ್ದರು.  
ಜಿಲ್ಲೆ

ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಿ

ಶ್ರೀನಾಥ

ಮಸ್ಕಿ: ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತಗಳಾಗದಂತೆ ಎಚ್ಚರವಹಿಸಬೇಕು ಎಂದು ಉಪನ್ಯಾಸಕ ಮಹಾಂತೇಶ ಮಸ್ಕಿ ಹೇಳಿದರು.

ಪಟ್ಟಣದ ಸಾರಿಗೆ ಡಿಪೋದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಯಾಣಿಕರು ಹೋಗಿ-ಬರುವ ಸ್ಥಳಕ್ಕೆ ಸುರಕ್ಷಿತವಾಗಿ ಕರೆದೊಯ್ಯಬೇಕು ಎಂದರು.

ವಾಹನ ಚಾಲಕರ ಆರೋಗ್ಯ ತಪಾಸಣೆ ಉಸ್ತುವಾರಿ ವೈದ್ಯ ಬಿ.ಎಚ್.ದಿವಟರ್ ಮಾತನಾಡಿ, ವಾಹನ ಚಾಲಕರು ದುಶ್ಚಗಳಿಗೆ ಬಲಿಯಾಗದೆ, ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಡಿಪೋ ವ್ಯವಸ್ಥಾಪಕ ಆದಪ್ಪ ಮಾತನಾಡಿ, ಮಸ್ಕಿ ಡಿಪೋದಲ್ಲಿ ಈ ವರ್ಷ ಕೇವಲ ಮೂರು ಅಪಘಾತಗಳಾಗಿದ್ದು, ಹೆಚ್ಚಿನ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದರು. ಉತ್ತಮ ವಾಹನ ಚಾಲಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಈಶಪ್ಪ ದೇಸಾಯಿ, ವಸತಿ ಶಾಲೆಯ ಪ್ರಾಚಾರ್ಯ ಯಂಕಪ್ಪ ಇತರರಿದ್ದರು.