filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.23000036, 0.42537516);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39; 
ಜಿಲ್ಲೆ

ಸಂಚಾರ ನಿಯಮ ಉಲ್ಲಂಸಿದರೆ ಕ್ರಮ - ವಾಹನ ಮಾಲೀಕರಿಗೆ ಎಚ್ಚರಿಕೆ - ಪೊಲೀಸ್ ಇಲಾಖೆ, ವಿಟ್ಲ ಪಪಂ ವತಿಯಿಂದ ಸಭೆ

Mangaluru - Nishantha Narayana

ವಿಟ್ಲ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ, ಬಸ್, ಕಾರು ಹಾಗೂ ರಿಕ್ಷಾ ವಾಹನ ಸಂಘದ ಪದಾಽಕಾರಿಗಳ ಸಭೆ ಶನಿವಾರ ನಡೆಯಿತು. ಈ ಸಂದರ್ಭ ಸಂಚಾರ ನಿಯಮ ಪಾಲಿಸದೇ ವಾಹನಗಳನ್ನು ನಿಲ್ಲಿಸುವ ವಿಚಾರ ಮುನ್ನೆಲೆಗೆ ಬಂದಿದ್ದು, ಕಟ್ಟುನಿಟ್ಟು ಕ್ರಮಕೈಗೊಳ್ಳುವ ಕುರಿತು ನಿರ್ಧರಿಸಲಾಯಿತು. ೨೦೧೪ರಲ್ಲಿ ವಾಹನ ನಿಷೇಧಿತ ಸ್ಥಳಗಳ ಗುರುತಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಸೋಮವಾರದಿಂದಲೇ ಜಾರಿಗೊಳಿಸುವ ಕುರಿತು ನಿರ್ಧರಿಸಲಾಯಿತು.

ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ದೇವಸ್ಥಾನವ ರಸ್ತೆಯನ್ನು ಅಂಚೆ ಕಚೇರಿ ಸಮೀಪದಿಂದ ನಾಲ್ಕು ಮಾರ್ಗ ಜಂಕ್ಷನ್ ತನಕ ಏಕಮುಖ ಸಂಚಾರ ರಸ್ತೆಯಾಗಿ ಮಾರ್ಪಡಿಸಲಾಗುತ್ತದೆ. ಬೀದಿಯಲ್ಲಿ ನಿಲ್ಲುವ ರಿಕ್ಷಾಗಳಿಂದಲೂ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಸಂತೆ ರಸ್ತೆಯಲ್ಲಿ ತಲಾ ರಿಕ್ಷಾವೊಂದಕ್ಕೆ ಅವಕಾಶ ನೀಡಲು ಅನುಮತಿಸಲಾಗುತ್ತದೆ.

ಬಸ್ ನಿಲ್ದಾಣದೊಳಗೆ ಕೊರಿಯರ್ ಲಾರಿ ಪ್ರವೇಶಿಸುವುದರಿಂದ ಬಸ್ ನಿಲುಗಡೆಗೆ ಸಮಸ್ಯೆಯಾಗುತ್ತಿದ್ದು, ರಿಕ್ಷಾಗಳೂ ಒಳಗೆ ಪ್ರವೇಶಿಸಿ ಅಡಚಣೆಯಾಗುತ್ತಿದೆ. ಶಾಲೆಯ ತಿರುವಿನಲ್ಲಿ ರಿಕ್ಷಾ ನಿಲುಗಡೆಗೊಳಿಸಬಾರದು. -ಟ್‌ಪಾತ್‌ಗಳಲ್ಲೇ ವಾಹನಗಳು ಸಂಚರಿಸುವ ಕಾರಣ ಪಾದಚಾರಿಗಳಿಗೆ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯಲ್ಲಿ ದೂರಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಮುಖ್ಯಾಧಿಕಾರಿ ಕರುಣಾಕರ, ಸಮುದಾಯ ಸಂಘಟನಾಧಿಕಾರಿ ಶ್ರೀಶೈಲ ಸಂಕನಗೌಡ, ವಿಟ್ಲ ಪೊಲೀಸ್ ಉಪ ನಿರೀಕ್ಷಕ ರತನ್ ಕುಮಾರ್, ಕೆಎಸ್‌ಅರ್‌ಟಿಸಿಯ ವಿಟ್ಲ ಟಿಸಿ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರು, ವಾಹನಗಳ ಮಾಲೀಕರು ಉಪಸ್ಥಿತರಿದ್ದರು.

ನಿಲುಗಡೆ ನಿಷೇಧಿತ ಪ್ರದೇಶ

ಬಸ್ ನಿಲ್ದಾಣದ ಮುಂಭಾಗದಲ್ಲಿ ಯಾವುದೇ ವಾಹನ ನಿಲುಗಡೆಗೆ ಅವಕಾಶವಿಲ್ಲ. ಹಳೇ ಬಸ್ ನಿಲ್ದಾಣದ ಒಳಗೆ ದ್ವಿಚಕ್ರ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಕ್ಯಾಂಪ್ಕೊ ರಸ್ತೆಯಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ. ಪ್ರಾರ್ಥನಾ ಮಂದಿರದ ಆಸುಪಾಸಿನಲ್ಲಿ ೧೦ಮೀ ವಾಹನ ನಿಲುಗಡೆ ಮಾಡಬಾರದು. ನಿಯಮ ಉಲ್ಲಂಸಿದ ವಾಹನ ಮಾಲೀಕರ ವಿರುದ್ಧ ಪೊಲೀಸ್ ಇಲಾಖೆ ಕ್ರಮಕೈಗೊಳ್ಳುವ ಕುರಿತು ಒಮ್ಮತದಿಂದ ನಿರ್ಧರಿಸಲಾಯಿತು.

ಬಸ್‌ಗಳಿಗೂ ನಿಯಮ ಜಾರಿ

ಹಳೇ ಬಸ್ ನಿಲ್ದಾಣದಲ್ಲಿ ಬಸ್‌ಗಳು ತುಂಬಿ ರಸ್ತೆಯಲ್ಲಿ ನಿಲ್ಲುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಖಾಸಗಿ ಬಸ್‌ಗಳಿಗೂ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ. ನಿಲ್ದಾಣದೊಳಗೆ ಪ್ರತಿ ಬಸ್ಸಿಗೂ ೧೫ ನಿಮಿಷ ನಿಲುಗಡೆಗೊಳಿಸಬಹುದಾಗಿದ್ದು, ರಸ್ತೆಯ ಬದಿಯಲ್ಲೂ ಬಸ್ ನಿಲುಗಡೆಗೊಳಿಸುವಂತಿಲ್ಲ. ಸಂಚಾರ ನಿಯಮ ಪಾಲಿಸದ ಬಸ್ ಚಾಲಕರ ವಿರುದ್ಧ ಕ್ರಮಕೈಗೊಳ್ಳುವ ಕುರಿತು ನಿರ್ಧರಿಸಲಾಯಿತು.

ಸಂಚಾರ ನಿಯಂತ್ರಣ ವಿಚಾರವನ್ನು ಅಭಿಯಾನ ರೀತಿಯಲ್ಲಿ ಜಾರಿಗೊಳಿಸಿದಾಗ ಜನರಿಗೆ ಅರಿವು ಮೂಡಿಸಬಹುದು. ಪೊಲೀಸ್ ಇಲಾಖೆ ಸಹಕಾರದಲ್ಲಿ ನಾಲ್ಕು ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ನಿಯಮ ಸೋಮವಾರದಿಂದಲೇ ಜಾರಿಗೊಳಿಸಲಾಗುವುದು. ಇದಕ್ಕೆ ವಾಹನ ಚಾಲಕರು ಕಡ್ಡಾಯ ಸಹಕರಿಸಬೇಕು. ಸಾಧಕ ಬಾಧಕಗಳನ್ನು ಗಮನಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು.

| ಕರುಣಾಕರ ವಿ. ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ

ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಬ್ಯಾನರ್ ಅಳವಡಿಕೆ ನಿಷೇಽಸಲಾಗಿದೆ. ಫುಟ್‌ಪಾತ್‌ಗಳಲ್ಲಿರುವ ಫಲಕಗಳನ್ನು ತಕ್ಷಣ ತೆರವು ಮಾಡಬೇಕು. ನಿಲ್ದಾಣದ ಹೊರತು ಬೇರೆಲ್ಲೂ ಬಸ್ ನಿಲ್ಲಿಸಬಾರದು. ಸ್ಥಳ ನಿಗಡಿಪಡಿಸಿದಲ್ಲೇ ರಿಕ್ಷಾ ಹಾಗೂ ಟಾಂಟಾಮ್ ವಾಹನ ನಿಲುಗಡೆಗೊಳಿಸಬೇಕು. ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಽಸಲಾಗಿದೆ.

| ಕರುಣಾಕರ ನಾಯ್ತೊಟ್ಟು ಪಟ್ಟಣ ಪಂಚಾಯಿತಿ ಅಧ್ಯಕ್ಷ