ವೇಮಗಲ್: ತಾಲೂಕಿನ ವೇಮಗಲ್ನ ಕರ್ನಾಟಕ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ರಸ್ತೆಯು ಹಳ್ಳ&ಕೊಳ್ಳಗಳಿಂದ ತುಂಬಿಕೊಂಡು ಗುಂಡಿಮಯವಾಗಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ಓಡಾಡಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ.
ರಸ್ತೆಯಲ್ಲಿ ಶಾಲಾ ವಾಹನಗಳು ಮತ್ತು ಖಾಸಗಿ ವಾಹನಗಳ ಸಂಚಾರ ಹೆಚ್ಚಿದ್ದು, ಮಳೆ ಬಂದರೆ ನೀರು ನಿಂತು ಗುಂಡಿ ಯಾವುದು, ರಸ್ತೆ ಯಾವುದು ಎಂಬುದೇ ಗೊತ್ತಾಗುವುದಿಲ್ಲ. ಈ ಬಗ್ಗೆ ಪಟ್ಟಣದ ನಾಗರಿಕರು ಹಲವು ಬಾರಿ ಪಟ್ಟಣ ಪಂಚಾಯಿತಿ ಗಮನಕ್ಕೆ ತಂದರೂ ಸಹ ಯಾಗುದೇ ಪ್ರಯೋಜವಾಗಿಲ್ಲ. ಪ್ರಜ್ಞಾವಂತ ನಾಗರಿಕರು ಗಿಡ ನೇಡುವ ಮೂಲಕ ಅಧಿಕಾರಿಗಳ ಗಮನಕ್ಕೆ ತಂದು ತಮ್ಮ ಆಕ್ರೋಶ ಹೋರ ಹಾಕಿದ್ದಾರೆ.
"ಈ ಕುರಿತು ಇಂಜಿನಿಯರ್ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಸರ್ಕಾರಿ ಶಾಲೆಯಿಂದ ಗಂಗಮ್ಮ ದೇವಾಲಯದವರೆಗೂ ಸಿಸಿ ರಸ್ತೆ ಮತ್ತು ಡಾಂಬರೀಕರಣ ಹಾಗೂ ಕಚೇರಿ ಮುಂಭಾಗದ ರಸ್ತೆ ಸೇರಿ ಹಲವು ಕಾಮಗಾರಿಗಳು ಆದಷ್ಟು ಬೇಗ ಅಭಿವೃದ್ಧಿ ಮಾಡಲಾಗುವುದು."
- ಎಸ್.ಎಂ.ವೆಂಕಟೇಶ್
ವೇಮಗಲ್ -ಕುರುಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
"ವೇಮಗಲ್ ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ತಾಲೂಕಿನ ಹಾದಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಆದರೆ ಈ ರಸ್ತೆ ವೇಮಗಲ್ ಪಟ್ಟಣದ ಮದ್ಯ ಭಾಗದಲ್ಲಿದ್ದು, 90ರಷ್ಟು ಜನ ತಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಇದೇ ರಸ್ತೆಯಲ್ಲಿ ಓಡಾಡುವುದರಿಂದ ಗುಂಡಿಮಯವಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಬಹಳ ಅನಾನುಕೂಲವಾಗಿದೆ. ಶ್ರೀ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು."
- ಹೆಸರು ಹೇಳಲು ಇಚ್ಛೀಸದ ನಾಗರಿಕ