ಜಿಲ್ಲೆ

ಸಂಚಾರ ನಿಷೇಧ; ಸಾಲುಗಟ್ಟಿನಿಂತ ಲಾರಿಗಳು

reportermys

ಮಡಿಕೇರಿ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಯನಾಡು-ದೇವರಕೊಲ್ಲಿಯಲ್ಲಿ ರಸ್ತೆ ಬಿರುಕುಬಿಟ್ಟ ಪರಿಣಾಮ ಸಂಪಾಜೆ ಗೇಟ್ ಬಳಿ ಲಾರಿಗಳು ಸಾಲುಗಟ್ಟಿನಿಂತಿದೆ.


ರಸ್ತೆ ಬಿರುಕುಬಿಟ್ಟ ಹಿನ್ನೆಲೆ ಬೃಹತ್ ವಾಹನಗಳ ಸಂಚಾರ ನಿಷೇಧಗೊಳಿಸಿದೆ. ಜತೆಗೆ ಕೊಯಿನಾಡು ಸಮೀಪ ಸೇತುವೆ ಒಂದು ಬದಿಯಲ್ಲಿ ಕುಸಿತ ಕಂಡ ಪರಿಣಾಮ ಬೃಹತ್ ಗಾತ್ರದ ವಾಹನಗಳ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಪರಿಣಾಮ ಸಂಪಾಜೆ ಗೇಟ್ ಬಳಿ ಲಾರಿಗಳು ಸಾಲುಗಟ್ಟಿನಿಂತಿದೆ. ರಸ್ತೆ ಸರಿಯಾದ ನಂತರ ಸಂಚಾರಕ್ಕೆ ಅವಕಾಶ ಸಿಗಲಿದೆ.


ಭೂ ಕುಸಿತ: ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ರಸ್ತೆ ಮೇಲೆ ಮಣ್ಣು, ಕಲ್ಲು, ಮರದ ರೆಂಬೆಕೊಂಬೆಗಳು ಮುರಿದು ಬಿದ್ದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರು ತೆರವು ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ. ಮತ್ತೊಂದೆಡೆ ಜೆಸಿಬಿ ಮೂಲಕ ಮನ್ಣು ತೆರವು ಕಾರ್ಯಚರಣೆ ನಡೆಸಿ, ಸಿಬ್ಬಂದಿಗಳು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು.