ಜಿಲ್ಲೆ

ಸಿಂಹದಲ್ಲಿದೆ ಸಾಂಪ್ರದಾಯಿಕ ಆಭರಣಗಳು: ಬೆಳಕಿನ ಹಬ್ಬಕ್ಕೆ ಹಲವು ಆಫರ್​ಗಳು ಲಭ್ಯ! Simha Jewellers

ಬೆಂಗಳೂರು: ಭಾರತೀಯ ಹಬ್ಬಗಳು ಸಂಭ್ರಮ ಹೆಚ್ಚಿಸುವ ಸುಸಂದರ್ಭಗಳು. ಅಂತಹ ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸುವುದಕ್ಕೆ ಒಡವೆ, ವಸ್ತ್ರ ಇತ್ಯಾದಿ ಖರೀದಿ ಸಹಜವಾದದ್ದು. ಅಂತಹ ಒಡವೆಗಳ ಸಾಂಪ್ರಾದಾಯಿಕ ವಿನ್ಯಾಸಗಳಿಗೆ ಪ್ರಸಿದ್ಧವಾದ ಮಳಿಗೆ ಸಿಂಹ ಜುವೆಲ್ಲರ್ಸ್ ( Simha Jewellers ).

ಬಸವೇಶ್ವರನಗರದ ಕೆಎಚ್​ಬಿ ಕಾಲನಿಯಲ್ಲಿರುವ ಸಿಂಹ ಜುವೆಲ್ಲರ್ಸ್ ಕಳೆದ ನಾಲ್ಕು ದಶಕಗಳಿಂದ ಗ್ರಾಹಕರ ವಿಶ್ವಾಸ, ನಂಬಿಕೆ ಮತ್ತು ಬೇಡಿಕೆಗನುಗುಣವಾಗಿ ವಿಶೇಷ ಆಭರಣಗಳ ಮೂಲಕ ಹೆಸರುವಾಸಿಯಾಗಿದೆ. ಸಂಪ್ರದಾಯ, ಪರಂಪರೆ ಪ್ರತಿಬಿಂಬಿಸುವ ಅತ್ಯಾಕರ್ಷಕ ವಿನ್ಯಾಸಗಳೊಂದಿಗೆ ಆಭರಣ ಸಂಗ್ರಹವನ್ನು ಹೊಂದಿರುವ ಸಿಂಹ ಜುವೆಲ್ಲರ್ಸ್, ಈ ದೀಪಾವಳಿ ಹಬ್ಬಕ್ಕಾಗಿ ವಿಶೇಷ ಕೊಡುಗೆಗಳನ್ನು ಹೊತ್ತು ತಂದಿದೆ. ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬ ಎಂದು ಕರೆಯುತ್ತಾರೆ. ನಿಜವಾದ ಬೆಳಕು ಬಂಗಾರದೊಂದಿಗೆ ಮನೆಗೆ ಬಂದರೆ ಅದರ ಆನಂದ ದೀರ್ಘ ಕಾಲ ಉಳಿಯಲಿದೆ.

ಧನ ತ್ರಯೋದಶಿ ಭಾರತೀಯ ಸಂಸ್ಕೃತಿಯಲ್ಲಿ ಸಮೃದ್ಧಿಯ ಸಂಕೇತವೆನ್ನಲಾಗುತ್ತದೆ. ಈ ದಿನ ಖರೀದಿ ಮಾಡಿದ ಚಿನ್ನವು ಮನೆಗೆ ಸಮೃದ್ಧಿ ತರುತ್ತದೆ ಎಂದು ನಂಬಲಾಗುತ್ತದೆ. ಆ ಕಾರಣದಿಂದ ಸಿಂಹ ಜುವೆಲ್ಲರ್ಸ್ ‘ಸಮೃದ್ಧಿಯ ಶುಭಾರಂಭ ಇದು ಚಿನ್ನ ಖರೀದಿಗೆ ಶ್ರೇಷ್ಠ ಸಮಯ’ ಎಂಬ ಪರಿಕಲ್ಪನೆಯಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಧನ ತ್ರಯೋದಶಿಯ ವಿಶೇಷ ಸಂದರ್ಭವನ್ನು ಗ್ರಾಹಕರ ಬಂಗಾರ ಖರೀದಿಗೆ ಬೇಕಾದಂತೆ ಸಜ್ಜುಗೊಳಿಸಲಾಗಿದೆ.

ಧನತ್ರಯೋದಶಿಗೆ ವಿಶೇಷ ಕೊಡುಗೆ

ಒಂದು ಲಕ್ಷ ರೂ. ಬೆಲೆಯ ಚಿನ್ನಾಭರಣ ಖರೀದಿಗೆ 1 ಚಿನ್ನದ ನಾಣ್ಯವನ್ನು ಉಚಿತವಾಗಿ ನೀಡುವ ವಿಶೇಷ ಕೊಡುಗೆಯನ್ನು ಸಿಂಹ ಜುವೆಲ್ಲರ್ಸ್ ಘೋಷಿಸಿದೆ. ಹಬ್ಬದ ವಿಶೇಷ ಕೊಡುಗೆಯು 25ರವರೆಗೆ ಮುಂದುವರೆಯಲಿದೆ. ಅ.18ರ ಧನ ತ್ರಯೋದಶಿಯಂದು ಬೆಳಗ್ಗೆ 8ರಿಂದ ರಾತ್ರಿ 10 ರವರೆಗೆ ಮಳಿಗೆ ತೆರೆದಿರುತ್ತದೆ. ಧನ ತ್ರಯೋದಶಿಯಂದು ಮಳಿಗೆಯಲ್ಲಿನ ಜನದಟ್ಟಣೆ ತಪ್ಪಿಸಿಕೊಳ್ಳಲು ಗ್ರಾಹಕರು www.simhajewellers.com ವೆಬ್​ಸೈಟ್ ಮೂಲಕ ಆನ್​ಲೈನ್ ಶಾಪಿಂಗ್​ನಲ್ಲಿ ಭಾಗಿಯಾಗಿ ತಮಗಿಷ್ಟವಾದ ಆಭರಣವನ್ನು ಬುಕ್ ಮಾಡಬಹುದು. ಧನತ್ರಯೋದಶಿಯಂದು ನೇರವಾಗಿ ಬಂದು ತಾವು ಬುಕ್ ಮಾಡಿದ ಆಭರಣವನ್ನು ಮನೆಗೆ ಕೊಂಡೊಯ್ಯಬಹುದು.

ವಿಳಾಸ

ಸಿಂಹ ಜುವೆಲ್ಲರ್ಸ್, ನಂ. 7/8, 1ನೇ ಮುಖ್ಯರಸ್ತೆ, ಕೆಎಚ್​ಬಿ ಕಾಲನಿ, ಬಸವೇಶ್ವರನಗರ, ಬೆಂಗಳೂರು - 560079, ದೂ: 96863 02916