ಜಿಲ್ಲೆ

ವ್ಯಾಪಾರ ಮಾಡೋಣ ಎಂದು 28.79 ಲಕ್ಷ ರೂ. ವಂಚನೆ

ರಾಣೆಬೆನ್ನೂರ: ಎಲ್ಲರೂ ಕೂಡಿಕೊಂಡು ವ್ಯಾಪಾರ ಮಾಡೋಣ ಎಂದು ಹೇಳಿ ಇಲ್ಲಿಯ ವ್ಯಕ್ತಿಯೊಬ್ಬನಿಗೆ ಬರೋಬ್ಬರಿಗೆ 28.79 ಲಕ್ಷ ರೂ. ವಂಚಿಸಿದ ಕುರಿತು ತಾಲೂಕಿನ ಹಲಗೇರಿ ಪೊಲೀಸ್​ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಮೈಸೂರಿನ ಮಮತಾ ಹಾಗೂ ಅರುಣ, ಶಿವಮೊಗ್ಗ ತಾಲೂಕಿನ ಆಯನೂರಿನ ಗೀತಾ ಹಾಗೂ ಚಂದ್ರಪ್ಪ ಮೋಸ ಮಾಡಿದ ಆರೋಪಿತರು.

ಇವರ ವಿರುದ್ಧ ಮೋಸ ಹೋಗಿರುವ ತಾಲೂಕಿನ ಹೆಡಿಯಾಲ ಗ್ರಾಮದ ಪರಮೇಶ ಕುರುಬರ (27) ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿತರು ವ್ಯಾಪಾರ ಮಾಡೋಣ ಎಂದು ಹೇಳಿ 2022ರಿಂದ ಈವರೆಗೆ 28.79 ಲಕ್ಷ ರೂ. ತೆಗೆದುಕೊಂಡು ಯಾವುದೆ ವ್ಯಾಪಾರ ಮಾಡದೆ ಹಾಗೂ ಹಣ ಕೂಡ ವಾಪಸ್​ ನೀಡದೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.