ಕಳ್ಳರಿಂದ ವಶಪಡಿಸಿಕೊಂಡ ಟ್ರಾೃಕ್ಟರ್ ಇಂಜಿನ್‌ಗಳ ಜತೆ ಪ್ರಕರಣ ಭೇದಿಸಿದ ಪೊಲೀಸ್ ತಂಡ. 
ಜಿಲ್ಲೆ

ಟ್ರಾೃಕ್ಟರ್ ಕಳ್ಳರ ಬಂಧನ

Kopala - Raveendra V K

ಕೊಪ್ಪಳ: ತಾಲೂಕಿನ ದದೇಗಲ್‌ನಲ್ಲಿ ಟ್ರಾೃಕ್ಟರ್ ಮತ್ತು ಟ್ರೇಲರ್ ಕದ್ದಿದ್ದ ಕಳ್ಳರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಗದಗ ಜಿಲ್ಲೆ, ಮುಂಡರಗಿ ತಾಲೂಕಿನ ಹಿರೇ ವಡ್ಡಟ್ಟಿ ಗ್ರಾಮದ ಕಿರಣರಡ್ಡಿ ಕುರ್ತಕೋಟಿ, ರಮೇಶ ಬೂದಿಹಾಳ ಬಂಧಿತರು. ಕೊಪ್ಪಳ, ಗದಗ, ದಾವಣಗೇರಾ ಸೇರಿ ವಿವಿಧೆಡೆ ಟ್ರಾೃಕ್ಟರ್, ಟ್ರೇಲರ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಅ.14ರಂದು ದದೇಗಲ್‌ನಲ್ಲಿ 15 ಲಕ್ಷ ರೂ. ಮೌಲ್ಯದ ಟ್ರಾೃಕ್ಟರ್ ಇಂಜಿನ್ ಹಾಗೂ ಟ್ರೇಲರ್ ಕದ್ದಿದ್ದರು. ಪ್ರಕರಣ ಭೇದಿಸಿದ ಪೊಲೀಸರು ಆರೋಪಿಗಳಿಂದ 24.10 ಲಕ್ಷ ರೂ. ಮೌಲ್ಯದ 4 ಟ್ರಾೃಕ್ಟರ್ ಇಂಜಿನ್ ಹಾಗೂ 5 ಟ್ರೇಲರ್ ವಶಕ್ಕೆ ಪಡೆದಿದ್ದಾರೆ.

ಸಿಪಿಐ ಮಹಾಂತೇಶ ಸಜ್ಜನ, ಪಿಎಸ್‌ಐಗಳಾದ ಅಶೋಕ ಬೇವೂರು, ಹೀರಪ್ಪ ನಾಯ್ಕ, ನಿಂಗಪ್ಪ, ಲಕ್ಕಪ್ಪ ಮತ್ತಿತರರ ತಂಡ ಪ್ರಕರಣ ಭೇದಿಸಿದೆ.