ಚಿಂತಾಮಣಿ: ನಗರದ ಗಜಾನನ ವೃತ್ತದ ಶೇಖರ್ ಹೋಟೆಲ್ ಎದುರು ಟ್ರ್ಯಾಕ್ಟರ್ ಚಲಿಸಿ ಪಾದಚಾರಿ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ. ನಗರದ ಅಂಬೇಡ್ಕರ್ ನಗರದ ನಿವಾಸಿ ಗಾರೆ ಕೆಲಸಗಾರ ಅಶೋಕ್ (35) ಮೃತ.
ರಸ್ತೆ ದಾಟುತ್ತಿದ್ದಾಗ ಟ್ರ್ಯಾಕ್ಟರ್ ಗುದ್ದಿದೆ. ಕೆಳಗೆ ಬಿದ್ದ ಅಶೋಕ್ ಮೇಲೆ ಟ್ರ್ಯಾಕ್ಟರ್‌ನ ಚಕ್ರಗಳು ಚಲಿಸಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ನಗರ ಠಾಣೆ ಪೊಲೀಸರು ಮೃತ ವ್ಯಕ್ತಿಯ ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ, ಟ್ರಾಕ್ಟರ್ ವಶಕ್ಕೆ ಪಡೆದಿದ್ದಾರೆ. ಮೃತನ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.