ಜಿಲ್ಲೆ

ಟ್ರಾೃಕ್ಟರ್ ಪಲ್ಟಿ, ಯುವಕ ಸಾವು

Belagavi

ತಲ್ಲೂರ: ಗ್ರಾಮದಿಂದ ಸೋಮಾಪುರಕ್ಕೆ ಟ್ರ್ಯಾಕ್ಟರ್ ಮೇಲೆ ತೆರಳುತ್ತಿದ್ದಾಗ ಟ್ರಾೃಕ್ಟರ್ ಪಲ್ಟಿಯಾಗಿ ಚಾಲಕನ ಪಕ್ಕ ಕುಳಿತಿದ್ದ ಕುಮಾರ ಬಸಪ್ಪ ಬಸಿಡೋಣಿ (22) ಎಂಬ ಯುವಕ ಮೃತಪಟ್ಟಿದ್ದಾನೆ.

ಘಟನೆಗೆ ಚಾಲಕ ಚಂದ್ರಪ್ಪ ಶಿವಪ್ಪ ನಾಯ್ಕರ ನಿರ್ಲಕ್ಷೃ ಕಾರಣ ಎಂದು ತಿಳಿದುಬಂದಿದೆ. ಇಬ್ಬರೂ ಸೋಮಾಪುರ ಗ್ರಾಮದವರು. ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.