ಜಿಲ್ಲೆ

ತಿಪಟೂರಿನೊಂದಿಗೆ ವಿಶೇಷ ಬಾಂಧವ್ಯ ;  ಡಾ.ರಾಜ್ ಆಪ್ತ ರಾಮುಸ್ವಾಮಿ ಜತೆ ವಿಶೇಷ ಒಡನಾಟ

Tumakuru

ತಿಪಟೂರು : ದಿವಂಗತ ಡಾ.ರಾಜ್‌ಕುವಾರ್, ತಿಪಟೂರಿನ ರಾಮುಸ್ವಾಮಿ ಅವರೊಂದಿಗೆ ಹೊಂದಿದ್ದ ಒಡನಾಟವನ್ನು ಅವರ ಪುತ್ರ ಪುನೀತ್ ರಾಜ್‌ಕುವಾರ್ ಮುಂದುವರಿಸಿಕೊಂಡು ಬಂದಿದ್ದ ಕಾರಣ ನಗರದ ಜನತೆಗೆ ಡಾ. ರಾಜ್ ಕುಟುಂಬ ಸದಸ್ಯರ ಬಗ್ಗೆ ವಿಶೇಷ ಅಭಿವಾನವಿತ್ತು.

1945ರಲ್ಲಿ ಗುಬ್ಬಿ ವೀರಣ್ಣ ನಾಟಕ ಕಂಪನಿ ತಿಪಟೂರಿನಲ್ಲಿ ನಾಟಕ ಪ್ರದರ್ಶನ ನೀಡಲು ಬಂದಿದ್ದಾಗ ನಗರದ ಕೆ.ಆರ್. ಬಡಾವಣೆಯ ಅಂಚೆ ಕಚೇರಿ ಬಳಿ ವಾಸ್ತವ್ಯ ಹೂಡಿದ್ದ ಸಯಮದಲ್ಲಿ ನಾಟಕ ಪ್ರದರ್ಶನಗಳಿಗೆ ಹೋಗುತ್ತಿದ್ದ ನಗರದ ರಾಮುಸ್ವಾಮಿ, ಡಾ.ರಾಜ್‌ರ ತಂದೆ ಪುಟ್ಟಸ್ವಾಮಿ ಅವರಿಗೆ ಪರಿಚಯವಾಗಿ ನಂತರ ಇದು ಸ್ನೇಹಕ್ಕೆ ತಿರುಗಿ ಅಂದಿನಿಂದ 62 ವರ್ಷಗಳ ಕಾಲ ಆತ್ಮೀಯ ಸಂಬಂಧ ಅಬಾಧಿತವಾಗಿ ಮುಂದುವರಿದಿತ್ತು.

ಡಾ.ರಾಜ್ ತಿಪಟೂರಿಗೆ ಬಂದಾಗಲೆಲ್ಲಾ ಗೆಳೆೆಯ ರಾಮುಸ್ವಾಮಿಯೊಂದಿಗೆ ನಗರ ಸಮೀಪದ ಅಯ್ಯನ ಬಾವಿಗೆ ತೆರಳಿ, ನೀರಿನಲ್ಲಿ ಕಾಲಾಡಿಸುತ್ತಾ ಉಭಯ ಕುಶಲೋಪರಿ ವಿಚಾರಿಸುತ್ತಿದ್ದರು. ಈಗ ರಾಜ್ ಇಲ್ಲವಾದರೂ ಅವರ ಕುಟುಂಬ ಸದಸ್ಯರು, ರಾಮಸ್ವಾಮಿ ಅವರ ಒಡನಾಟ ತಪ್ಪಿಸಿಲ್ಲ. ಇದಕ್ಕೆ ನಿದರ್ಶನವೆಂಬಂತೆ ರಾಜ್ ಕುರಿತ ‘ಪರ್ಸನ್ ಬಿಹೈಂಡ್ ಪರ್ಸನಾಲಿಟಿ’ ಮತ್ತು ‘ವ್ಯಕ್ತಿತ್ವದ ಹಿಂದಿರುವ ವ್ಯಕ್ತಿಗಳು’ಪುಸ್ತಕಕ್ಕೆ ಬೇಕಾದ ವಾಹಿತಿ ಸಂಗ್ರಹಿಸಲು ನಗರಕ್ಕೆ ಆಗಮಿಸಿದ್ದ ಪುನೀತ್ ಬೆಳಗಿನಿಂದ ಸಂಜೆವರೆಗೂ ರಾಮುಸ್ವಾಮಿಯವರ ಮನೆಯಲ್ಲಿ ಕುಟುಂಬ ಸಮೇತ ತಂಗಿದ್ದರು.

1945ರಿಂದ ಇಲ್ಲಿವರೆಗೂ ದೊಡ್ಡಮನೆ ಗೆಳೆತನ ಮುಂದುವರಿದಿದೆ. ಆದರೆ ಒಬ್ಬೊಬ್ಬರೇ ವಿಧಿವಶರಾಗುತ್ತಿರುವ ನೋವು ಸಹಿಸಿಕೊಳ್ಳಲಾಗುತ್ತಿಲ್ಲ. ನಾನು ಎತ್ತಿ ಆಡಿಸಿದ ಅಪ್ಪು ಇಷ್ಟು ಬೇಗ ಎಲ್ಲರ ಅಪ್ಪುಗೆಯಿಂದ ದೂರವಾಗುತ್ತಾನೆ ಎಂದು ನೆನೆಸಿರಲಿಲ್ಲ. ನನ್ನ ಮನಸ್ಸೆಲ್ಲಾ ಅಲ್ಲಿದೆ. ಆದರೆ ದೇಹ ವಾತ್ರ ಇಲ್ಲಿದೆ. ರಾಮುಸ್ವಾಮಿ, ತಿಪಟೂರು