ಜಿಲ್ಲೆ

ಭಜರಂಗಿ ಬಾಯ್ಸ್ ಸತತ 2ನೇ ಗೆಲುವು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಎನ್1 ಕ್ರಿಕೆಟ್ ಅಕಾಡೆಮಿ ಆಯೋಜಿಸಿರುವ ಟೆಲಿವಿಷನ್ ಪ್ರಿಮೀಯರ್ ಲೀಗ್ (ಟಿಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಭಜರಂಗಿ ಬಾಯ್್ಸ ತಂಡ ಸತತ 2ನೇ ಗೆಲವು ಸಾಧಿಸಿತು.

ಇಂದು ಎ ಗುಂಪಿನ ಮೊದಲ ಹಣಾಹಣಿಯಲ್ಲಿ ಕೆಕೆಆರ್ ಕಿಂಗ್ಸ್ ಎದುರು 6 ವಿಕೆಟ್​ಗಳಿಂದ ಸುಲಭ ಜಯ ದಾಖಲಿಸಿತು. ಇನ್ನುಳಿದ ಪಂದ್ಯಗಳಲ್ಲಿ ಬಯೋಟಾಪ್ ಲೈಫ್ ಸೇವಿಯರ್ಸ್ ತಂಡ ಗೋಲ್ಡನ್ ಈಗಲ್ಸ್ ವಿರುದ್ಧ 6 ವಿಕೆಟ್​ಗಳಿಂದ, ಕೆಕೆಆರ್ ಕಿಂಗ್ಸ್ ತಂಡ ದಿ ಬುಲ್ ಸ್ಕಾ್ವಡ್ ವಿರುದ್ಧ 7 ರನ್​ಗಳಿಂದ ಹಾಗೂ ಅಶ್ವಸೂರ್ಯ ರೈಡರ್ಸ್ ತಂಡ ಬಯೋಟಾಪ್ ಲೈಫ್ ಸೇವಿಯರ್ಸ್ ವಿರುದ್ಧ 8 ವಿಕೆಟ್​ಗಳಿಂದ ಜಯ ಗಳಿಸಿತು.

ಟೂರ್ನಿಯಲ್ಲಿ ಒಟ್ಟು 10 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಮಾ. 3ರಂದು ರಾತ್ರಿ 7 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ.