Fist hand power logo. Protest strong fist raised fight icon, rebel illustration 
ಜಿಲ್ಲೆ

ಹೋರಾಟಕ್ಕೆ ತಾಪಂ ನೌಕರರು ಬೆಂಬಲ

ಮುಂಡರಗಿ: ಪಟ್ಟಣದ ತಾಪಂ ಆವರಣದಲ್ಲಿ ವೇತನ ಪಾವತಿ ಹಾಗೂ ಸೇವಾ ಭದ್ರತೆಗೆ ಒತ್ತಾಯಿಸಿ ನರೇಗಾ ಸಿಬ್ಬಂದಿ ಸೋಮವಾರ ಅಸಹಕಾರ ಚಳವಳಿ ಕೈಗೊಂಡರು.

ಪ್ರತಿಭಟನೆಗೆ ಬೆಂಬಲ ಸೂಚಿಸಿದ ತಾಪಂ ಯೋಜನಾಧಿಕಾರಿ ವಿಜಯಕುಮಾರ ಬೆಣ್ಣೆ ಮಾತನಾಡಿ, ನರೇಗಾ ಯೋಜನೆ ಗ್ರಾಮೀಣಾಭಿವೃದ್ಧಿ ಆಶಯಕ್ಕೆ ಪೂರಕವಾದ ಕಾರ್ಯಕ್ರಮ. ಸಿಬ್ಬಂದಿಯ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷ ಮಹೇಶ ಅಲ್ಲಿಪೂರ, ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಎಂ.ಕಾತರಕಿ, ಸೆಕ್ರೆಟರಿ ಸಂಘದ ಅಶೋಕ ಅಣ್ಣಿಗೇರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಾಬುದ್ದೀನ್ ನದಾಫ್, ಕನ್ನಡ ಕ್ರಾಂತಿಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಮುಧೋಳ, ಬಿಎಫ್‌ಟಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಮುಗಳಿ, ಬಿಲ್ ಕಲೆಕ್ಟರ್ ಹಾಗೂ ಡಿಇಒ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮೇವುಂಡಿ ಮಾತನಾಡಿದರು.

ತಾಪಂ ಸಿಬ್ಬಂದಿ ಶರಣು ಗಿರಣಿ, ಗವಿಸಿದ್ದಪ್ಪ ಮಡಿವಾಳರ, ನರೇಗಾ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ಗುಡಿಮನಿ, ಪ್ರವೀಣ ಸೂಡಿ, ಬಸವರಾಜ ಮಣ್ಣಮ್ಮನವರ, ಸಿದ್ದು, ಗೋಪಾಲ ಹೊಸಮನಿ, ವೀರಯ್ಯ ಅಳವಂಡಿಮಠ, ಸುರೇಶ ಬಳ್ಳಾರಿ, ಸತೀಶ ಡೊಳ್ಳಿನ, ಮಲ್ಲಿಕಾರ್ಜುನ ಯವಗಲ್ಲ, ದ್ಯಾಮಣ್ಣ ಹಳ್ಳಿ, ರಮೇಶ ಪಾಳೇಗಾರ, ಹನಮಂತರಾಜ ನಾಯಕ, ಶಂಭಯ್ಯ ಡಂಬಳಮಠ, ಫಕೀರಪ್ಪ ಹಾರೋಗೇರಿ, ಮುತ್ತು ಶಿರೂರ, ಬೀರಪ್ಪ ಮರೇಗೌಡ್ರ, ಲಕ್ಷ್ಮಣ ಹೊಸಕುರುಬರ, ಯಲ್ಲಪ್ಪ ಹಾದಿಮನಿ, ರವೀಂದ್ರ ಸೂಡಿ, ನಾಗರಾಜ ಸಣಕಲ್ ಇದ್ದರು.