ಜಿಲ್ಲೆ

ರಟ್ಟಿಹಳ್ಳಿ ತಾಪಂ ಇಒ, ಪಪಂ ಮುಖ್ಯಾಧಿಕಾರಿ ಅಧಿಕಾರ ಸ್ವೀಕಾರ

Haveri - Desk - Ganapati Bhat

ರಟ್ಟಿಹಳ್ಳಿ: ಸ್ಥಳೀಯ ತಾಲೂಕು ಪಂಚಾಯಿತಿ ನೂತನ ಕಾರ್ಯನಿವಾಹಕ ಅಧಿಕಾರಿಯಾಗಿ ಟಿ.ಆರ್. ಮಲ್ಲಾಡದ ಅಧಿಕಾರ ಸ್ವೀಕರಿಸಿದರು.

ಪ್ರಭಾರ ಇಒ ಶಶಿಧರ ಎಚ್. ಅಧಿಕಾರ ಹಸ್ತಾಂತರಿಸಿದರು. ಈ ಹಿಂದೆ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಟಿ.ಆರ್. ಮಲ್ಲಾಡದ ಕಾರ್ಯ ನಿರ್ವಹಿಸಿದ್ದರು.

ಖಾಲಿ ಇದ್ದ ರಟ್ಟಿಹಳ್ಳಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಟಿ.ಆರ್. ಮಲ್ಲಾಡದ ಅವರನ್ನು ಪೂರ್ಣಾವಧಿಗೆ ನಿಯೋಜನೆಗೊಳಿಸಿ ಸರ್ಕಾರ ಆದೇಶದ ಹೊರಡಿಸಿದೆ.

ಸಹಾಯಕ ನಿರ್ದೇಶಕ ಜಿ.ಜಿ. ನಾಯಕ, ದೇವರಾಜ ಸಣ್ಣಕಾರ್ಗೆರ ಮತ್ತು ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ ಮತ್ತು ತಾ.ಪಂ ಸಿಬ್ಬಂದಿ ಉಪಸ್ಥಿತರಿದ್ದರು.

ಪ.ಪಂ. ಮಖ್ಯಾಧಿಕಾರಿ ನಿಯೋಜನೆ

ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಸಂತೋಷ ಚಂದ್ರಖೇರ ಅವರನ್ನು ಪೂರ್ಣವಧಿಗಾಗಿ ಸರ್ಕಾರ ನಿಯೋಜಿಸಿ ಅದೇಶ ಹೊರಡಿಸಿದೆ. ಈ ಹಿಂದೆ ಚುನಾವಣೆ ನಿಮಿತ್ತ ನೇಮಕವಾಗಿದ್ದ ರಾಜಶೇಖರ ಚೌಗಲಾ ಅವರನ್ನು ವರ್ಗಾವಣೆಗೊಳಿಸಿ ಸಂತೋಷ ಚಂದ್ರಖೇರ ಅವರನ್ನು ಪ.ಪಂ. ಮುಖ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.