ಬಿಡದಿ: ಮೂರು ದಿನಗಳಿಂದ ಟೊಯೋಟಾ ಕಿಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆ ಕಾರ್ವಿುಕರು ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಬೆಂಬಲ ವ್ಯಕ್ತಪಡಿಸಿದೆ. ಕಂಪನಿ ಲಾಕೌಟ್ ಹಿಂಪಡೆಯಬೇಕು, ಕಾರ್ವಿುಕರ ಶೋಷಣೆ ನಿಲ್ಲಿಸಬೇಕು ಎಂಬುದೂ ಸೇರಿ ಹಲವು ಒತ್ತಾಯದೊಂದಿಗೆ ನಡೆಸುತ್ತಿರುವ ಪ್ರತಿಭಟನೆ ನಾಲ್ಕನೆ ದಿನವಾದ ಶುಕ್ರವಾರವೂ ಮುಂದುವರಿದಿದೆ. ವೇದಿಕೆ ಅಧ್ಯಕ್ಷ ಪಿ.ಕೃಷ್ಣೇಗೌಡ ಮಾತನಾಡಿ, ಸರ್ಕಾರ ಮತ್ತು ಆಡಳಿತ ಮಂಡಳಿ ಮಧ್ಯ ಪ್ರವೇಶ ಮಾಡಿ ಕಾರ್ವಿುಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ನಮ್ಮ ನೆಲದಲ್ಲಿ ನಡೆಯುತ್ತಿರುವ ಸಂಸ್ಥೆ ಕಾರ್ವಿುಕರಿಗೆ ತೊಂದರೆ ನೀಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ನಿಯಮದಂತೆ ಅಮಾನತು
ಕಾರ್ಖಾನೆ ಆವರಣದಲ್ಲಿ ಶಿಸ್ತು ಉಲ್ಲಂಘನೆ ಮತ್ತು ಸ್ವೀಕಾರಾರ್ಹವಲ್ಲದ ನಡವಳಿಕೆಯಲ್ಲಿ ‘ಧರಣಿ ಮುಷ್ಕರ’ದ ಒಂದು ಭಾಗವಾಗಿ, ತಂಡದ ಸದಸ್ಯರು ಕಾನೂನು ಬಾಹಿರವಾಗಿ ಸಂಸ್ಥೆ ಆವರಣದಲ್ಲಿ ಉಳಿದುಕೊಂಡು ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರು. ಇದರಿಂದಾಗಿ ಕಾರ್ಖಾನೆಯಲ್ಲಿ ಆತಂಕದ ಪರಿಸ್ಥಿತಿ ಉಂಟಾಗುತ್ತಿತ್ತು. ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮ ಗಮನದಲ್ಲಿಟ್ಟುಕೊಂಡ ಅಧಿಕಾರಿಗಳು ಬಿಡದಿ ಸ್ಥಾವರದಲ್ಲಿ ಲಾಕೌಟ್ ಘೊಷಿಸಬೇಕಾಯಿತು. ಯೂನಿಯನ್ ಮತ್ತು ಸದಸ್ಯರು ಕಂಪನಿ ಆವರಣದ ಹೊರಗೆ ಕುಳಿತು ಘೊಷಣೆ ಕೂಗುತ್ತಾ ಮುಷ್ಕರ ಮುಂದುವರಿಸಿದ್ದಾರೆ. ಇದು ಮುಂದುವರಿದು ಟಿಕೆಎಂನ 39 ಸದಸ್ಯರು ದುಷ್ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅಂತಹವನ್ನು ಗುರುತಿಸಿ ಸಂಸ್ಥೆ ನಿಯಮಾನುಸಾರ ಅಮಾನತುಗೊಳಿಸಿ ವಿಚಾರಣೆಯಲ್ಲಿ ಇರಿಸಲು ನಿರ್ಧರಿಸಲಾಗಿದೆ ಎಂದು ಟಿಕೆಎಂ ಅಧಿಕೃತ ಹೇಳಿಕೆ ಪ್ರಕಟಿಸಿದೆ.
39 ಕಾರ್ವಿುಕರನ್ನು ಅಮಾನತಿನಲ್ಲಿ ಇಟ್ಟಿರುವ ಬಗ್ಗೆ ಟಿಕೆಎಂ ಆದೇಶಿಸಿರುವುದು ಗಮನಕ್ಕೆ ಬಂದಿದೆ. ಕಾರ್ವಿುಕರ ಹಿತದೃಷ್ಟಿಯಿಂದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರ್ಚಚಿಸಿ ಹೋರಾಟ ರೂಪಿಸಲಾಗುವುದು. | ಬಸವರಾಜ್ ಹವಾಲ್ದಾರ್, ಜಂಟಿ ಕಾರ್ಯದರ್ಶಿ, ಟಿಕೆಎಂ ಕಾರ್ವಿುಕರ ಸಂಘಟನೆ