ಬ್ರಹ್ಮಾವರ: ಒಂದು ಊರಿನ ಪ್ರಗತಿ ಅಲ್ಲಿನ ಯುವಕರ ಸಮಾಜಮುಖಿ ಕಾರ್ಯದಲ್ಲಿ ಇರುತ್ತದೆ. ಶಾಲೆ, ದೇವಸ್ಥಾನ, ಧಾರ್ಮಿಕ ಆಚರಣೆಗಳು ಮುಂದುವರಿಯಲು ಸಮಾಜಮುಖಿ ಯುವಕರಿಂದ ಮಾತ್ರ ಸಾಧ್ಯ ಎಂದು ಅಂತಾರಾಷ್ಟ್ರೀಯ ಜಾದೂಗಾರ ಓಂಗಣೇಶ್ ಹೇಳಿದರು.
ಸಮಾಜಸೇವೆಯೊಂದಿಗೆ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಅಭಿಮತ ಸಂಭ್ರಮ-2024ರ ದಿನ ನಿಗದಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಬಾರಿ ತಾಲೂಕು ಕೇಂದ್ರ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ದೋಸೆ ಕ್ಯಾಂಪ್ ಆಯೋಜನೆ ಮಾಡಲಾಗಿದ್ದು, ಹಂದಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪೂಜಾರಿ ದೋಸೆ ಮಾಡುವ ಮೂಲಕ ಕ್ಯಾಂಪ್‌ಗೆ ಚಾಲನೆ ನೀಡಿದರು.
ಶಾಸಕ ಯಶ್‌ಪಾಲ್ ಸುವರ್ಣ, ಜನ ಚಳವಳಿಗಾರ ಆಲ್ವಿನ್ ಅಂದ್ರಾದೆ, ಅಶ್ವಿನಿ ಶೆಟ್ಟಿ ಬನ್ನಾಡಿ ಉಪಸ್ಥಿತರಿದ್ದರು. ಅಭಿಮತ ಟೀಂನ ಅಧ್ಯಕ್ಷ ವಸಂತ್ ಗಿಳಿಯಾರು ಮತ್ತು ತಂಡ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕುಂದಾಪುರ ಕನ್ನಡ ರಾಯಬಾರಿ ಮನು ಹಂದಾಡಿ ಕಾರ್ಯಕ್ರಮ ನಿರೂಪಿಸಿದ್ದರು.