ಕಸ ವಿಲೇವಾರಿಗಾಗಿ ಮುನವಳ್ಳಿ ಪುರಸಭೆ ವತಿಯಿಂದ ಖರೀದಿಸಿದ ನೂತನ ವಾಹನಕ್ಕೆ ಪುರಸಭೆ ಅಧ್ಯಕ್ಷ ವಿಜಯ ಅಮಠೆ ಚಾಲನೆ ನೀಡಿದರು. ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಸುನೀಲ ಕದಂ, ರೇಣವ್ವ ಭಜಂತ್ರಿ, ಮಹೇಂದ್ರ ತಿಮ್ಮಾಣಿ, ಅರುಣ ರೇವಡಗಿ, ಮಾರುತಿ ಬಾರಕೇರ ಇತರರು ಇದ್ದರು. 
ಜಿಲ್ಲೆ

ಪಟ್ಟಣದ ಸ್ವಚ್ಛತೆಗೆ ಎಲ್ಲರೂ ಒತ್ತು ನೀಡಿ

ಮುನವಳ್ಳಿ: ಪಟ್ಟಣದ ಸ್ವಚ್ಛತೆಗೆ ಹಲವಾರು ಕ್ರಿಯಾ ಯೋಜನೆ ಹಮ್ಮಿಕೊಳ್ಳಲಾಗಿದೆ. ಪುರಸಭೆ ವತಿಯಿಂದ ಮುಕ್ತಿ ವಾಹನ ಖರೀದಿಸಿದ್ದು, ಸಾರ್ವಜನಿಕರು ಉಚಿತವಾಗಿ ಬಳಸಬಹುದು. ಕಸ ವಿಲೇವಾರಿಗೆ ಟ್ರ್ಯಾಕ್ಟರ್ ಖರೀದಿಸಲಾಗಿದೆ. ಸುಂದರ ಪಟ್ಟಣ ನಿರ್ಮಾಣಕ್ಕೆ ಎಲ್ಲರೂ ಸಾಥ್ ನೀಡಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಕೋರಿದ್ದಾರೆ. ಪಟ್ಟಣದ ಪುರಸಭೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ವಿಜಯ ಅಮಠೆ ಮಾತನಾಡಿದರು. ಪುರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ದುರಸ್ತಿ, ವಾಣಿಜ್ಯ ಮಳಿಗೆಗಳ ದರ ಅನುಮೋದನೆ ಪ್ರಸ್ತಾವನೆ ಸಲ್ಲಿಸುವುದು, ಪುರಸಭೆಯ ಘನತ್ಯಾಜ್ಯ ವಸ್ತು ಘಟಕಕ್ಕೆ ಹೋಗುವ ರಸ್ತೆ ಅಭಿವೃದ್ಧಿಪಡಿಸುವುದು, ವಿವಿಧ ವಾರ್ಡ್‌ಗಳ ರಸ್ತೆ ದುರಸ್ತಿ ಮಾಡುವುದು ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು.

ಪುರಸಭೆ ಉಪಾಧ್ಯಕ್ಷೆ ರೇಣವ್ವ ಭಜಂತ್ರಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಪುರಸಭೆ ಸದಸ್ಯರಾದ ಅರುಣ ರೇವಡಗಿ, ಮಾರುತಿ ಬಾರಕೇರ, ಶ್ರೀಶೈಲ ಮಠಪತಿ, ದುಂಡಪ್ಪ ಬುರ್ಜಿ, ಸುಭಾಷ ಗಂಗಣ್ಣವರ, ಅರ್ಜುನ ದೊಡಮನಿ, ಸುನೀಲ ಕದಂ, ಫಾರೂಖ್ ಬಿಸ್ತಿ, ಸುಜಾತಾ ಅಷ್ಠಗಿಮಠ, ಪ್ರಭಾವತಿ ಮಲಗೌಡ್ರ, ಪಾರ್ವತೆವ್ವ ಮೇದಾರ, ಅನಿಲ ಗಿಡ್ನಂದಿ, ಮನೋಹರ ಅಜಮನಿ, ರವಿ ಬಾಗಲಕೋಟ ಇದ್ದರು.