ಜಿಲ್ಲೆ

ಪ್ರಗತಿಪಥದತ್ತ ಕರೋಶಿ ಸೊಸೈಟಿ

ಪ್ರಶಾಂತ ಹೂಗಾರ

ಚಿಕ್ಕೋಡಿ: ಕರೋಶಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರ ಸಂಸ್ಥೆ ಕಳೆದ ಆರ್ಥಿಕ ವರ್ಷದಲ್ಲಿ 39.31 ಲಕ್ಷ ರೂ. ನಿವ್ವಳ ಲಾಭಗಳಸಿದ್ದು, ಪ್ರಸಕ್ತ ವರ್ಷ 45 ಲಕ್ಷ ರೂ. ಮೇಲ್ಪಟ್ಟು ಲಾಭ ಗಳಿಸುವ ಗುರಿ ಹೊಂದಿದೆ ಎಂದು ಅಧ್ಯಕ್ಷ ಮಹೇಶ ಭಾತೆ ಹೇಳಿದರು.

ತಾಲೂಕಿನ ಕರೋಶಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶ ಪಿಕೆಪಿಎಸ್‌ನ 104ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದೇ ಸೂರಿನಡಿ ರೈತರಿಗೆ ವಿವಿಧ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಕಾಯ್ದಿಟ್ಟ ನಿಧಿಯಲ್ಲಿ ಶೇ.25 ಕಾಯ್ದಿರಿಸಲಾಗುವುದು. ಸದಸ್ಯರಿಗೆ ಶೇ.10 ಲಾಭಾಂಶ ವಿತರಿಸಲಾಗುತ್ತಿದೆ. 1546 ಸದಸ್ಯರು, 1.35 ಕೋಟಿ ರೂ. ಷೇರು ಬಂಡವಾಳ, 6.71 ಕೋಟಿ ರೂ. ಠೇವಣಿ, 17.79 ಕೋಟಿ ರೂ. ದುಡಿಯುವ ಬಂಡವಾಳ, 77.51 ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿದೆ ಎಂದರು.

ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ.ಸೊಲ್ಲಾಪೂರೆ ವಾರ್ಷಿಕ ವರದಿ ಓದಿದರು. ನಿರ್ದೇಶಕರಾದ ಡಿ.ಬಿ.ಪೂಜಾರಿ, ಜ್ಞಾನೇಶ್ವರ ಮಾಂಗೂರೆ, ಶಿವಾಜಿ ಶಿಂಗಾಯಿ, ಎ.ಬಿ.ಪಟೇಲ್, ರಮೇಶ ಕುಂಬಾರ, ದುಂಡಪ್ಪ ಮಜಲಟ್ಟಿ, ಇಮಾಮಹುಸೇನ್ ಪಟೇಲ್, ರಮೇಶ ಕುಂಬಾರ, ಅರುಣ ಬಿದರೆ, ಶೈಲಜಾ ಮುಗಳಿ, ಶಿವಲೀಲಾ ಜಗದೀಶ ಮಗದುಮ್, ಡಿಸಿಸಿ ಬ್ಯಾಂಕ್ ನಿರೀಕ್ಷಕ ಸಂತೋಷ ಪಾಟೀಲ, ವಿಜಯ ಕೋಟಿವಾಲೆ, ಗ್ರಾಪಂ ಅಧ್ಯಕ್ಷ ಪಂಚಾಕ್ಷರಿ ಹಳಿಜೋಳೆ, ಬಸವರಾಜ ಮಡಿವಾಳ, ಸಾವಿತ್ರಿ ಜೇಧೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.