ಗಂದಿಗವಾಡದ ಶ್ರೀ ಬಸವೇಶ್ವರ ವಿವಿಧೋದ್ದೇಶಗಳ ಕೋ-ಆಪ್ ಸೊಸೈಟಿ ಸಭೆಯಲ್ಲಿ ಸಾಧಕಿ ಸುನೀತಾ ದೊಂಡಪ್ಪನವರ ಅವರನ್ನು ಸತ್ಕರಿಸಲಾಯಿತು. ಲಕ್ಷ್ಮೀ ಕಮತಗಿ, ರೂಪಾ ಕಮ್ಮಾರ, ಮಹಾಂತೇಶ ಕಮತಗಿ ಇತರರಿದ್ದರು. 
ಜಿಲ್ಲೆ

ಪ್ರಗತಿಯತ್ತ ಬಸವೇಶ್ವರ ಸೊಸೈಟಿ

ರಾಘವೇಂದ್ರಗೌಡ ಭೀ ಪಾಟೀಲ್

ಇಟಗಿ: ವಿವಿಧ ಉದ್ಯೋಗ ಕೈಗೊಳ್ಳುವ ಯುವಕರು ಮತ್ತು ರೈತರಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಸಹಕಾರಿ ಆರ್ಥಿಕ ಪ್ರಗತಿ ಹೊಂದುತ್ತಿದೆ ಎಂದು ಕಾರ್ಯದರ್ಶಿ ಮಹಾಂತೇಶ ಕಮತಗಿ ಹೇಳಿದರು.

ಸಮೀಪದ ಗಂದಿಗವಾಡ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ವಿವಿಧೋದ್ದೇಶಗಳ ಕೋ-ಆಪ್ ಸೊಸೈಟಿಯ 30ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ವರ್ಷ ಸದಸ್ಯರಿಗೆ ಶೇ.20 ಲಾಭಾಂಶ ವಿತರಿಸುತ್ತಿದ್ದು, ಈ-ಸ್ಟಾೃಂಪಿಂಗ್ ಸೇವೆ ಪ್ರಾರಂಭಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.

ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಲಾಯಿತು. ಸಹಕಾರಿ ಅಧ್ಯಕ್ಷ ರುದ್ರಗೌಡ ಪಾಟೀಲ, ಉಪಾಧ್ಯಕ್ಷ ಬಾಬು ಯಮಕನಮರಡಿ, ನಿರ್ದೇಶಕರಾದ ಬಸಯ್ಯ ಚಿಕ್ಕಮಠ, ಆನಂದ ಚಳಕಿ, ಕಲ್ಲಪ್ಪ ಕಮತಗಿ, ಮಹಾಂತೇಶ ಚಿಕ್ಕಮಠ, ಶಿವಪ್ರಸಾದ ಮೂಲಿಮನಿ, ಚಾಂದಸಾಬ್ ಗದಗ, ದೇಸಾಯಿ ಗಾಳಿ, ಬಸಪ್ಪ ಕುರಗುಂದ, ಲಕ್ಷ್ಮೀ ಕಮತಗಿ, ರೂಪಾ ಕಮ್ಮಾರ, ಸಾಧಿಕ ಭಾಗವಾನ, ರಾಮಪ್ಪ ಪಂಡಿ ಇತರರಿದ್ದರು.