ತಿ.ನರಸೀಪುರ ಸಮೀಪದ ತಾಯೂರು ಗ್ರಾಮದಲ್ಲಿ ಮೈಸೂರು ಯುವರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಾಲಿನ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಜೆಡಿಎಸ್ ವಕ್ತಾರ ತಯೂರು ಪ್ರಕಾಶ್ ಮಾತನಾಡಿದರು. ಡಾ.ಲೋಕೇಶ್, ಡಾ.ಗಿರೀಶ್ ಚಂದ್ರ, ಟಿ.ಬಿ.ಸದ್ಗುರು, ಪ್ರಕಾಶ್, ಶಿವಶಂಕರ, ಸ್ವಾಮಿ ಇದ್ದರು. 
ಜಿಲ್ಲೆ

ಸೇವಾ ಕಾರ್ಯದ ಮುಖೇನ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿ

ತಿ.ನರಸೀಪುರ: ಕಾಲೇಜು ವಿದ್ಯಾರ್ಥಿಗಳು ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ವ್ಯಕ್ತಿತ್ವ, ವಿಕಸಗೊಳಿಸಿಕೊಳ್ಳಲು ರಾಷ್ಟೀಯ ಸೇವಾ ಯೋಜನೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳನ್ನು ಸೇವಾ ಕಾರ್ಯದ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರಾಜ್ಯ ಜೆಡಿಎಸ್ ವಕ್ತಾರ ತಾಯೂರು ಪ್ರಕಾಶ್ ಕರೆ ನೀಡಿದರು.

ವರುಣ ವಿಧಾನಸಭಾ ಕ್ಷೇತ್ರದ ತಾಯೂರು ಗ್ರಾಮದಲ್ಲಿ ಭಾನುವಾರ ಸಂಜೆ ಮೈಸೂರು ಯುವರಾಜ ಕಾಲೇಜಿನ(ಸ್ವಾಯತ್ತ) ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಜೀವನ ಸಂದೇಶ ಸೇವೆಗೆ ಸಂಬಂಧಿಸಿದ್ದು. ಸೇವೆ ಇಲ್ಲದ ಜೀವನ ಅದು ಜೀವನವೇ ಅಲ್ಲ. ಬೇರೆಯವರಿಗಾಗಿ ಬದುಕಿರುವವರು ಮಾತ್ರ ಬದುಕಿದಂತೆ, ಉಳಿದವರು ಬದುಕಿದ್ದರೂ ಸತ್ತಂತೆ ಎಂಬ ಗಾಂಧಿ ಅವರ ಮಾತು ಅಕ್ಷರಶಃ ಸತ್ಯವಾಗಿದೆ. ಗಾಂಧೀಜಿ ಆಶಯದಂತೆ ಅನುಭವ ಮತ್ತು ಪರಿಶ್ರಮಕ್ಕೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚು ಗಮನ ಹರಿಸಲಾಗಿದೆ ಎಂದರು.

ರಾಷ್ಟ್ರ ಪ್ರಗತಿಯಾಗಬೇಕಾದರೆ ನಮ್ಮ ಯುವ ಜನತೆ, ಅದರಲ್ಲಿಯೂ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನರಿಯಬೇಕು ಎಂಬುದು ಗಾಂಧೀಜಿ ಅವರ ಕನಸಾಗಿತ್ತು. ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ. ಇದರಿಂದ ಸ್ವಯಂಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ. ಸಮಾಜಸೇವೆಯ ಪ್ರಜ್ಞೆ ಜಾಗೃತಗೊಳ್ಳುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಲೋಕೇಶ್, ಡಾ.ಗಿರೀಶ್ ಚಂದ್ರ, ಟಿ.ಬಿ.ಸದ್ಗುರು, ಪ್ರಕಾಶ್, ಶಿವಶಂಕರ, ಸ್ವಾಮಿ, ವಿದ್ಯಾರ್ಥಿಗಳಾದ ಟಿ.ಎಸ್.ಪವನ್ , ಆರ್.ಹೇಮಂತ್, ಎಸ್.ಪ್ರತಿಕ್ ಪಾಟಿಲ್, ಬಿ.ವಿನಯ್, ಬಿ.ಕೆ.ಭರತ್‌ಕುಮಾರ್, ಸಿ.ಆದಿತ್ಯ, ಸಿ.ಬಿ.ರಾಘವೇಂದ್ರ, ಚಂದನ ಗದ್ದಿ, ನಂದಿನಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಾಧುನಾಯಕ, ಯಜಮಾನರಾದ ರೇವಣ್ಣನಾಯಕ, ಚಿಕ್ಕಬಸವನಾಯಕ, ಮೈಕ್ ಸಿದ್ದರಾಜು, ಬದನಾಳು ಬಸಪ್ಪ ಹಾಗೂ ಗ್ರಾಮಸ್ಥರು ಇದ್ದರು.