ಇಟಗಿ: ಬಸವೇಶ್ವರ ವಿವಿಧೋದ್ದೇಶಗಳ ಕೋ-ಆಪರೇಟಿವ್ ಸೊಸೈಟಿ 21.36 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ರುದ್ರಗೌಡ ಪಾಟೀಲ ಹೇಳಿದರು.
ಸಮೀಪದ ಗಂದಿಗವಾಡ ಗ್ರಾಮದ ಸೊಸೈಟಿಯ ಅನುಭವ ಮಂಟಪ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 32ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು.
ಸಂಘ 20. 64 ಕೋಟಿ ರೂ. ದುಡಿಯುವ ಬಂಡವಾಳ, 16.69 ಕೋಟಿ ರೂ. ಠೇವಣಿ ಹೊಂದಿದೆ. 14.45 ಕೋಟಿ ರೂ. ವಿವಿಧ ರೀತಿಯ ಸಾಲ ವಿತರಿಸಿದೆ. ಸದಸ್ಯರಿಗೆ ಶೇ.20 ಲಾಭಾಂಶ ವಿತರಿಸಲಾಗುವುದು ಎಂದರು.
ಕಾರ್ಯದರ್ಶಿ ಮಹಾಂತೇಶ ಕಮತಗಿ ಮಾತನಾಡಿ, ಸೊಸೈಟಿಯಿಂದ ವಿವಿಧ ರೀತಿಯ ಮಾರುಕಟ್ಟೆ ಪ್ರಾಂಗಣ ಪ್ರಾರಂಭಿಸುವ ಯೋಜನೆಯಿದೆ ಎಂದರು.
ಉಪಾಧ್ಯಕ್ಷ ಆನಂದ ಚಳಕಿ, ನಿರ್ದೇಶಕರಾದ ಬಾಬು ಯಮಕನಮರ್ಡಿ, ಕಲ್ಲಪ್ಪ ಕಮತಗಿ, ಉಮೇಶ ಹಿರೇಮಠ, ಮಹಾಂತೇಶ ಚಿಕ್ಕಮಠ, ಶಿವಪ್ರಸಾದ ಮೂಲಿಮನಿ, ಮಹಾಂತೇಶ ಮೂಲಿಮನಿ, ಗೌಸ್ ಬಾಗವಾನ್, ಚಾಂದಸಾಬ್ ಗದಗ, ದೇಸಾಯಿ ಗಾಳಿ, ಬಸಪ್ಪ ಕುರಗುಂದ, ಲಕ್ಷ್ಮೀ ಕಮತಗಿ, ರೂಪಾ ಕಮ್ಮಾರ, ಸಾದಿಕ್ ಬಾಗವಾನ್, ರಾಮಪ್ಪ ಂಡಿ, ಶ್ರೀಧರ ತಟ್ಟಿಮನಿ ಇತರರಿದ್ದರು.