ಕಾರ್ಗಲ್: ಸ್ವಾತಂತ್ರ‍್ಯ ದಿನದ ರಜೆ ಹಿನ್ನೆಲೆಯಲ್ಲಿ ಜೋಗ ಜಲಪಾತ ವೀಕ್ಷಿಸಲು ಮಂಗಳವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಮನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಾಗರ ಮತ್ತು ಸಿದ್ದಾಪುರ, ಕಾರ್ಗಲ್‌ನ ಸ್ಥಳೀಯ ಪ್ರವಾಸಿಗರ ಸಂಖ್ಯೆ ಹೇರಳವಾಗಿತ್ತು.
ಪ್ರವಾಸಿಗರು-ಜೆಎಂಎ ವಾಗ್ವಾದ: ನಾವು ಸ್ಥಳೀಯರು, ಜೋಗ ಜಲಪಾತವನ್ನು ವೀಕ್ಷಿಸಲು ನಮಗೆ ಉಚಿತ ಪ್ರವೇಶ ನೀಡಬೇಕು ಎಂದು ಸಾಗರ ತಾಲೂಕು ಮತ್ತು ಸಿದ್ದಾಪುರ ಸುತ್ತಮುತ್ತಲಿನಿಂದ ಆಗಮಿಸಿದ್ದ ಸಾಕಷ್ಟು ಪ್ರವಾಸಿಗರು ಮುಖ್ಯದ್ವಾರದ ಬಳಿಯೇ ಆಗ್ರಹಿಸಿದರು. ಉಚಿತವಾಗಿ ಒಳಬಿಡಲು ಅವಕಾಶವಿಲ್ಲ, ಟಿಕೆಟ್ ಪಡೆಯಬೇಕು ಎಂದು ಜೆಎಂಎ (ಜೋಗ ನಿರ್ವಹಣಾ ಪ್ರಾಽಕಾರ) ವ್ಯವಸ್ಥಾಪಕ ಶ್ರೀನಿವಾಸ್ ಪ್ರವಾಸಿಗರನ್ನು ಸಮಾಧಾನಪಡಿಸಿದರು.
ಜೋಗ ಜಲಪಾತ ವೀಕ್ಷಿಸುವ ಮೈಸೂರು ಬಂಗಲೆ ಎದುರು ಜೋಗ ನಿರ್ವಹಣಾ ಪ್ರಾಽಕಾರದಿಂದ ವ್ಯವಸ್ಥಾಪಕ ಶ್ರೀನಿವಾಸ್ ಪ್ರವಾಸಿಗರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಿದರು.